ಎರಡು ಸಾವಿರ ರೂ.ಗೆ ಸಿನಿಮಾ ಟಿಕೆಟ್​ ಮಾರುವ ನಟರು ದೇಶವನ್ನು ಉಳಿಸ್ತಾರಾ? ತಮಿಳುನಾಡು ಮಂತ್ರಿ ಅಚ್ಚರಿ ಪ್ರಶ್ನೆ!

tn
Published on

ಚೆನ್ನೈ: ತಮ್ಮ ಸಿನಿಮಾ ಟಿಕೆಟ್ ಗಳನ್ನು ಅಭಿಮಾನಿಗಳಿಗೆ ದುಬಾರಿ ಬೆಲೆಗೆ ಮಾರಿ, ಕೋಟಿ ಕೋಟಿ ಹಣವನ್ನು ಗುಡ್ಡೆಹಾಕಿಕೊಳ್ಳುವ ನಟರು ಈ ದೇಶವನ್ನು ಉಳಿಸ್ತಾರಾ? ಎಂದು ತಮಿಳುನಾಡು ಟಿಎಂಸಿ ಸಚಿವ ಟಿ.ಎಂ.ಅನ್ಬರಸನ್ ಪ್ರಶ್ನಿಸಿದ್ದಾರೆ.

ತಮಿಳುನಾಡಿನ ಮಾಂಗಾಡುವಿನಲ್ಲಿ ಬುಧವಾರ ರಾತ್ರಿ ಡಿಎಂಕೆ ಕಾರ್ಯಕರ್ತರ ಸಭೆಯಲ್ಲಿ ನಾಯಕ ವಿಜಯ್ ಅವರನ್ನು ಕುರಿತು ಮಾತನಾಡಿ, ಇತ್ತೀಚೆಗೆ ರಾಜಕೀಯ ಪಕ್ಷ ಸ್ಥಾಪಿಸಿದ ನಟರೊಬ್ಬರು ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿದ್ದಾರೆ. ಆದರೆ ನಮ್ಮ ಪಕ್ಷ ಹಿಂದಿನಿಂದಲೂ ಈ ರೀತಿಯ ಬಹುಮಾನಗಳನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇನ್ನು ಈ ನಟ ಸಿನಿಮಾವೊಂದಕ್ಕೆ 200 ಕೋಟಿ ಚಾರ್ಜ್ ಮಾಡುತ್ತಾನೆ. ಈ ಹೀರೋ ತನ್ನ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ಉಚಿತ ಟಿಕೆಟ್ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅವರ ಸಿನಿಮಾ ಟಿಕೆಟ್ ಗಳನ್ನು ಅಭಿಮಾನಿಗಳಿಗೆ 2 ಸಾವಿರ ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net