ಇಂಜಿನಿಯರ್​ ವಿದ್ಯಾರ್ಥಿಗಳಿಂದ ಕಡಿಮೆ ವೆಚ್ಚದ ಇ-ಬೈಕ್​ ಸಂಶೋಧನೆ: ಗಂಟೆಗೆ ಎಷ್ಟು ಕಿ.ಮೀ ಚಲಿಸಬಲ್ಲದು?

Bike
Published on

ಚೆನ್ನೈ: ತಮಿಳುನಾಡು ಮೂಲದ ಇಂಜಿನಿಯರ್ ವಿದ್ಯಾರ್ಥಿಗಳು ಕಡಿಮೆ ವೆಚ್ಚದ ಎಲೆಕ್ಟ್ರಿಕ್​ ಬೈಕ್ (ವಿದ್ಯುತ್​ ಚಾಲಿತ) ತಯಾರು ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕೊಯಮತ್ತೂರಿನ ಖಾಸಗಿ ಇಂಜಿನಿಯರ್​ ಕಾಲೇಜಿನ ವಿದ್ಯಾರ್ಥಿಯಾಗಳಾಗಿದ್ದು, ತಾವು ತಯಾರಿಸಿದ ಎಲೆಕ್ಟ್ರಿಕ್​ ಬೈಕ್​ 3D ಪ್ರಿಂಟೆಡ್​ ಭಾಗಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.

ಈ ಬಗ್ಗೆ ಮಾತನಾಡಿರುವ ಎಸ್​. ಕಿರಣ್​ ಲಾಲ್​ ಮತ್ತು ವಿ ಭಾರ್ತಿಕನ್​​, ಇದೊಂದು ಎಲೆಕ್ಟ್ರಿಕ್​ ಮೋಟರ್​ ಆಗಿದೆ. ಇದಕ್ಕೆ ಲಿಥಿಯಮ್​-ಐಯಾನ್​ ಬ್ಯಾಟರಿ ಅಳವಡಿಸಲಾಗಿದೆ. ಗಂಟೆಗೆ 27 ಕಿ.ಮೀ ವೇಗದಲ್ಲಿ 25 ಕಿ.ಮೀ ಗೂ ಅಧಿಕ ದೂರವನ್ನ ಕ್ರಮಿಸಲಿದೆ. ಒಮ್ಮೆ ಚಾರ್ಜ್​ ಮಾಡಲು 2.5 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, 0.6 ಯುನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕಡಿಮೆ ಪ್ರಯಾಣದ ವಾಹನವನ್ನು ಇಂಟ್ರಾಕ್ಯಾಂಪಸ್​ ಮೊಬಿಲಿಟಿಯಾಗಿ ಬಳಸಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರಿ ಕಚೇರಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಹೋಗಲು ವಾಹನ ನೆರವಾಗಲಿದೆ. ದೂರ ಪ್ರಯಾಣ ಹೊರತುಪಡಿಸಿ ಸ್ಥಳೀಯವಾಗಿಯೂ ಉಪಯೋಗಿಸಬಹುದಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net