

ಮಂಡ್ಯ: ಗ್ರಾಮದ ಮಧ್ಯೆದಲ್ಲಿಯೇ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಮನೆ ಮಾಡಿದೆ.
ಗ್ರಾಮದ ಮಂಜಣ್ಣ ಎಂಬುವರ ಮಗ ಅಭಿಷೇಕ್(25) ಕೊಲೆಯಾದವ. ಶನಿವಾರ ರಾತ್ರಿ ಗ್ರಾಮದ ಮಧ್ಯದಲ್ಲಿಯೇ ಕೊಲೆ ನಡೆದಿದೆ. ಮಾರಾಕಾಸ್ತ್ರಗಳಿಂದ ಅಭಿಷೇಕ್ ಮೇಲೆ ಹಲ್ಲೆ ಮಾಡಲಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಭಾನುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಕರೆಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ಏನೆಂಬುದು ತಿಳಿದಿಲ್ಲ. ಹಳೇ ವೈಷಮ್ಯ ಏನಾದರೂ ಇರಬಹುದಾ ಎಂದು ಶಂಕಿಸಲಾಗಿದೆ. ಆದರೆ, ಕೊಲೆಯಿಂದಾಗಿ ಗ್ರಾಮದಲ್ಲಿ ಆತಂಕ ಹೆಚ್ಚಿದೆ. (ದಿಗ್ವಿಜಯ ನ್ಯೂಸ್)