More

    ಗುಣಮುಖರ ಪಟ್ಟಿಯಲ್ಲಿ ಭಾರತವೇ ಮೊದಲು

    ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ಗುಣಮುಖರ ಸಂಖ್ಯೆಯೂ ಶರವೇಗದಲ್ಲಿ ಹೆಚ್ಚಾಗುತ್ತಿದೆ. ಶುಕ್ರವಾರ ಹೊಸದಾಗಿ 93 ಸಾವಿರ ಸೋಂಕಿತರು ಪತ್ತೆಯಾಗಿದ್ದರೆ, 95 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖ ಪ್ರಮಾಣವು ಶೇ. 79.28ಕ್ಕೆ ಏರಿಕೆಯಾಗಿದೆ. ಜಾಗತಿಕವಾಗಿ ಗುಣಮುಖರ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.

    ಭಾರತದಲ್ಲಿ 53 ಲಕ್ಷದಷ್ಟು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 42 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ 69 ಲಕ್ಷ ಪ್ರಕರಣ ಪತ್ತೆಯಾಗಿದ್ದು, 41.92 ಲಕ್ಷ ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಮರಣ ಪ್ರಮಾಣವು ಶೇ. 1.61ಕ್ಕೆ ಇಳಿಕೆಯಾಗಿದೆ. ಭಾರತವು ಸೋಂಕಿತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಒಟ್ಟಾರೆ ಪ್ರಕರಣ ದಲ್ಲಿ ಶೇ. 17 ಪಾಲನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಸೌದಿಯಲ್ಲಿ ಭಿಕ್ಷಾಟನೆಗೆ ನಿಂತ ಭಾರತೀಯರು

    ಸೌದಿ ಅರೇಬಿಯಾದಲ್ಲಿ ಕರೊನಾ ಸೋಂಕಿನ ಕಾರಣ ನೌಕರಿ ಕಳೆದುಕೊಂಡಿ ರುವ ಭಾರತೀಯರ ಪೈಕಿ 450ಕ್ಕೂ ಅಧಿಕ ಜನರು ರಸ್ತೆಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಕಾಶ್ಮೀರ, ಬಿಹಾರ, ಹರಿಯಾಣ, ಪಂಜಾಬ್, ಮಹಾರಾಷ್ಟ್ರದ ಮೂಲದವರು ಇಂಥ ದೈನೇಸಿ ಸ್ಥಿತಿಯಲ್ಲಿ ಇದ್ದಾರೆ. ಅವರನ್ನು ಸೌದಿ ಸರ್ಕಾರವು ಬಂಧಿಸಿದ್ದು, ಕಾರಾಗೃಹದಲ್ಲಿ ಇರಿಸಿದೆ. ಬಂಧಿತರಲ್ಲಿ ಉತ್ತರ ಪ್ರದೇಶ ಮೂಲದವರು 39, ಬಿಹಾರದ 10, ತೆಲಂಗಾಣದಿಂದ ಐವರು, ಮಹಾರಾಷ್ಟ್ರ, ಕಾಶ್ಮೀರ ಮತ್ತು ಕರ್ನಾಟಕದ ತಲಾ ನಾಲ್ವರು ಮತ್ತು ಆಂಧ್ರ ಪದೇಶ ಓರ್ವ ವ್ಯಕ್ತಿ ಇದ್ದಾರೆ ಎನ್ನಲಾಗಿದೆ.

    • ರಾಜಧಾನಿ ನವದೆಹಲಿಯಲ್ಲಿ ಕರೊನಾ ಸೋಂಕು ಸಾಮುದಾಯಿಕ ಪ್ರಸರಣದ ಹಂತಕ್ಕೆ ಬಂದಿದೆ ಎಂದು ರಾಜ್ಯದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಆದರೆ ಇದನ್ನು ಐಸಿಎಂಆರ್ ಖಚಿತ ಪಡಿಸಿಲ್ಲ.
    • 2021ರ ಏಪ್ರಿಲ್ ವೇಳೆಗೆ ದೇಶದ ಎಲ್ಲ ಜನರಿಗೆ ಕರೊನಾ ಔಷಧ ದೊರಕುವುದನ್ನು ನಿರೀಕ್ಷಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
    • ಆಕ್ಸ್​ಫರ್ಡ್ ವಿವಿಯ ಕರೊನಾ ಔಷಧದ 3ನೇ ಹಂತದ ಪ್ರಯೋಗವನ್ನು ಸೆರಂ ಸಂಸ್ಥೆ ಮುಂದಿನ ವಾರ ನಡೆಸಲಿದೆ.

    ಗುಣಮುಖರ ಪಟ್ಟಿಯಲ್ಲಿ ಭಾರತವೇ ಮೊದಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts