ದೀಪಾವಳಿ ಹಬ್ಬಕ್ಕೆ ಪಾಲಕರು ಬಟ್ಟೆ ಕೊಡಿಸಲಿಲ್ಲ ಅಂತ ಸಾವಿನ ಹಾದಿ ಹಿಡಿದ ಯುವಕ!

Youth
Published on

ಹೊಸೂರು: ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿಲ್ಲ ಅಂತಾ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಉಳಿಮಂಗಲಂನಲ್ಲಿ ನಡೆದಿದೆ.

ಶಿವಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ದೀಪಾವಳಿ ಹಬ್ಬಕ್ಕೆ ಪಾಲಕರು ಬಟ್ಟೆ ಕೊಡಿಸಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಕುಮಾರ್​ ನರ್ಸರಿ ಫಾರ್ಮ್​ನಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚಿಗೆ ಯುವಕರ ಜೊತೆ ಸೇರಿ ಮದ್ಯವ್ಯಸನಿಯಾಗಿದ್ದ. ದೀಪಾವಳಿ ಹಿನ್ನೆಲೆಯಲ್ಲಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವಂತೆ ಪಾಲಕರ ಬಳಿ ಕೇಳಿದ್ದ.

ಆದರೆ, ಪಾಲಕರು ಬಟ್ಟೆ ಕೊಡಿಸಲು ನಿರಾಕರಿಸಿದ್ದಕ್ಕೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾತ್​ರೂಮ್​ನಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಡೆಂಕಣಿಕೋಟೆ ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net