ಸೆಕ್ಸ್​ಗೆ ಒತ್ತಾಯಿಸಿದ ಗಂಡನನ್ನು ವಿಷವಿಟ್ಟು ಕೊಂದ ಹೆಂಡತಿ!

ಚೆನ್ನೈ: ಮದುವೆಯಾದ ಹೆಂಡತಿಗೆ ಸೆಕ್ಸ್​ಗೆ ಒತ್ತಾಯಿಸಿದ ಗಂಡ ಆಕೆಯ ಕೈನಿಂದಲೇ ಇಹಲೋಕ ಸೇರಿರುವ ಘಟನೆ ತಮಿಳುನಾಡಿದ ಪೆರಿಯಮೋಲಪಾಲಯಂನಲ್ಲಿ ನಡೆದಿದೆ. ಗಂಡನನ್ನು ನಾನೇ ಕೊಲೆ ಮಾಡಿದೆ ಎಂದು ಗರ್ಭಿಣಿ ಮಹಿಳೆ ಪೊಲೀಸರ ಎದುರು ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆ.

ಮೈಥಿಲಿ (21) ಗಂಡನನ್ನೇ ಕೊಂದಿರುವ ಹೆಂಡತಿ. ಆಕೆ ಎಂಟು ತಿಂಗಳ ಹಿಂದೆ ನಂದ ಕುಮಾರ್​ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದಳು. ನಂದ ಕುಮಾರ್​ಗೆ ಅದು ಎರಡನೇ ಮದುವೆಯಾಗಿತ್ತು. ಮೈಥಿಲಿಗೆ ಐದು ತಿಂಗಳ ಹಿಂದೆ ಗರ್ಭ ನಿಂತಿತ್ತು. ಐದು ತಿಂಗಳ ಗರ್ಭವತಿ ಹೆಂಡತಿಗೆ ನಂದ ಕುಮಾರ್​ ಸೆಕ್ಸ್​ಗಾಗಿ ಪೀಡಿಸುತ್ತಿದ್ದನಂತೆ.

ಕೃಷಿಕನಾಗಿರುವ ನಂದ ಕುಮಾರ್​ ಕೆಲಸ ಮುಗಿಸಿ ಬಂದು ಪ್ರತಿನಿತ್ಯ ಸೆಕ್ಸ್​ ಮಾಡು ಎಂದು ಗೋಳಿಡುತ್ತಿದ್ದನಂತೆ. ಅದರಿಂದಾಗಿ ಬೇಸತ್ತಿದ್ದ ಮೈಥಿಲಿ ಗಂಡನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾಳೆ. ಜನವರಿ 28ರಂದು ಆತ ಊಟ ಮಾಡುವ ಊಟದಲ್ಲಿ ಕೀಟನಾಶಕ ಹಾಕಿ ಬಡಿಸಿದ್ದಾಳೆ. ಅದನ್ನು ತಿಂದ ನಂದ ಕುಮಾರ್​ ಅಸ್ವಸ್ಥನಾಗಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸುಮಾರು 15 ದಿನಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ, ಆತ ಫೆಬ್ರವರಿ 15ರಂದು ಕೊನೆಯುಸಿರೆಳೆದಿದ್ದಾನೆ.

ನಂದ ಕುಮಾರ್​ ಅಸು ನೀಗಿದ ನಂತರ ಈ ವಿಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಮೈಥಿಲಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ತಾನೇ ಗಂಡನನ್ನು ವಿಷವಿಟ್ಟು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್​)

ಪೆಟ್ರೋಲ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ ಮಾಯಾವತಿ

9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಜೋಕೊವಿಕ್, 18ನೇ ಗ್ರಾಂಡ್ ಸ್ಲಾಂ ಕಿರೀಟ

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ