More

  ಕೊನೆಗೂ Instagram ಖಾತೆ ತೆರೆದ ವಿಜಯ್​: 1 ದಿನದಲ್ಲಿ ಗಳಿಸಿದ ಫಾಲೋವರ್ಸ್​ ಸಂಖ್ಯೆ ಹುಬ್ಬೇರಿಸುವಂತಿದೆ!

  ಚೆನ್ನೈ: ಇನ್​ಸ್ಟಾಗ್ರಾಂನಿಂದ ದೂರ ಉಳಿದಿದ್ದ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್, ಕೊನೆಗೂ ಇನ್​ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. “ಹೆಲೋ ನನ್ಬಾ ಆ್ಯಂಡ್​ ನನ್ಬೀಸ್​”​ ಎಂಬ ಅಡಿಬರಹದೊಂದಿಗೆ ಇನ್​ಸ್ಟಾಗ್ರಾಂಗೆ ವಿಜಯ್​ ಚೊಚ್ಚಲ ಪ್ರವೇಶ ಮಾಡಿದ್ದಾರೆ.

  ಸಾಮಾಜಿಕ ಜಾಲತಾಣ ವೇದಿಕೆಗೆ ವಿಜಯ್​ ಎಂಟ್ರಿ ಕೊಡುತ್ತಿದ್ದಂತೆ ಫಾಲೋವರ್ಸ್​ಗಳ ಮಹಾಪೂರವೇ ಹರಿದುಬಂದಿದೆ. ಖಾತೆ ತೆರೆದ ಕೇವಲ 24 ಗಂಟೆಯಲ್ಲಿ ಬರೋಬ್ಬರಿ 4.2 ಮಿಲಿಯನ್​ ಫಾಲೋವರ್ಸ್​ ಗಳಿಸಿದ್ದಾರೆ.

  ಸದ್ಯ ವಿಜಯ್​ ಅವರು ಲೋಕೇಶ್ ಕನಗರಾಜ್ ನಿರ್ದೇಶನದ ‘ಲಿಯೋ’ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಫೋಟೋದಲ್ಲಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್​ರನ್ನು ಲಕ್ಷಾಂತರ ಮಂದಿ ಆರಾಧಿಸುವುದರಿಂದ ಅವರ ಫಾಲೋವರ್ಸ್​ ಸಂಖ್ಯೆ ದಾಖಲೆ ಮಟ್ಟ ತಲುಪುವ ಸಾಧ್ಯತೆ ಇದೆ.

  ಇದನ್ನೂ ಓದಿ: ಆಂಟಿ ಎಂದು ಕರೆದರೆ ನಿಮಗೇಕೆ ಕೋಪ ಬರುತ್ತೆ? ಅಭಿಮಾನಿ ಪ್ರಶ್ನೆಗೆ ಅನಸೂಯ ಕೊಟ್ಟ ಉತ್ತರ ವೈರಲ್​

  ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವಿಜಯ್, ಸ್ವಲ್ಪ ಸಮಯ ವಿರಾಮವನ್ನು ಪಡೆದುಕೊಂಡಿದ್ದರು. ಇದೀಗ ಇನ್​ಸ್ಟಾಗ್ರಾಂ ಮೂಲಕ ಜಾಲತಾಣ ವೇದಿಕೆಗೆ ವಿಜಯ್​ ಮರು ಪ್ರವೇಶ ಪಡೆದಿದ್ದು, ತಮ್ಮ ವೈಯಕ್ತಿಕ ಫೋಟೋಗಳನ್ನು ಪೋಸ್ಟ್ ಮಾಡಲು ಮತ್ತು ತಮ್ಮ ಸಿನಿಮಾಗಳನ್ನು ಪ್ರಚಾರ ಮಾಡಲು ಹೊಸ ಮಾರ್ಗವಾಗಿದೆ. ಅಲ್ಲದೆ, ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಇದು ಸಹಕಾರಿಯಾಗಿದೆ.

  ವಿಜಯ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ 7.8 ಮಿಲಿಯನ್ ಮತ್ತು ಟ್ವಿಟರ್‌ನಲ್ಲಿ 4.4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

  ಲಿಯೋ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್, ತ್ರಿಶಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಅರ್ಜುನ್ ಮತ್ತು ಮಲಯಾಳಂ ನಟ ಮ್ಯಾಥ್ಯೂ ಥಾಮಸ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​)

  View this post on Instagram

  A post shared by Vijay (@actorvijay)

  ಮೂರು ಚಿತ್ರಗಳಿಗೆ ಸುದೀಪ್​ ಗ್ರೀನ್​ ಸಿಗ್ನಲ್​; ಸದ್ಯದಲ್ಲೇ ಘೋಷಣೆ

  ಕೊನೆಗೂ ’45’ಗೆ ನಾಯಕಿ ಫಿಕ್ಸ್​; ಚಿತ್ರತಂಡಕ್ಕೆ ಸೇರ್ಪಡೆಯಾದ ಕೌಸ್ತುಭ ಮಣಿ

  ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ಸದ್ಯದಲ್ಲೇ ಬಿಡುಗಡೆ …

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts