ಕೊಹ್ಲಿ ಜತೆ ಲವ್ವಿಡವ್ವಿ, ಪಾಕ್​ ಕ್ರಿಕೆಟಿಗನೊಂದಿಗೆ ಮದುವೆ! ಕಡೆಗೂ ವದಂತಿಗಳಿಗೆ ತಮನ್ನಾ ಸ್ಪಷ್ಟನೆ, ಖಡಕ್ ಉತ್ತರ | Tamannaah

ವಿಜಯವಾಣಿ (1)
Published on

Tamannaah: ನಟಿಯಾಗಿ ತನ್ನ ವಿರುದ್ಧ ಯಾವೆಲ್ಲ ವಿಚಾರಗಳು ಸಿಕ್ಕಾಪಟ್ಟೆ ಚರ್ಚೆಗೆ ಬರುತ್ತವೆ ಮತ್ತು ತನ್ನದಲ್ಲದ ವಿಷಯಗಳಲ್ಲಿ ತನ್ನ ಹೆಸರನ್ನು ತಳುಕು ಹಾಕುವ ಮಾಧ್ಯಮದ ವಿರುದ್ಧ 'ಮಿಲ್ಕಿ ಬ್ಯೂಟಿ' ಗರಂ ಆಗಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡ ಬಹುಭಾಷಾ ನಟಿ, ತಮನ್ನಾ ಭಾಟಿಯಾ, ಈ ಹಿಂದೆ ಟೀಮ್ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ ಜೊತೆ ಡೇಟಿಂಗ್ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜತೆಗಿನ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಬ್ಬಿದ್ದ ದೊಡ್ಡ ವದಂತಿ ಕುರಿತು ಕಡೆಗೂ ಮೌನ ಮುರಿದಿದ್ದಾರೆ.

ಅಸಲಿಗೆ ಆಗಿದ್ದೇನು?

2020ರಲ್ಲಿ ಅಬ್ದುಲ್ ರಜಾಕ್​ ಜೊತೆಗೆ ಜ್ಯುವೆಲರಿ ಈವೆಂಟ್​ಗೆ ತಮನ್ನಾ ಹಾಜರಾಗಿದ್ದರು. ಈ ವೇಳೆ ಇಬ್ಬರೂ ಜೊತೆಯಲ್ಲಿ ಕಾಣಿಸಿಕೊಂಡ ವಿಷಯ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಒಂದಷ್ಟು ನೆಟ್ಟಿಗರು, ಇವರಿಬ್ಬರು ಶೀಘ್ರವೇ ಮದುವೆ ಆಗಲಿದ್ದಾರೆ ಎಂಬ ವದಂತಿಗಳನ್ನು ಹಬ್ಬಿಸಿದ್ದರು. ಇದು ನಟಿಯನ್ನು ತೀರ ಮುಜುಗರಕ್ಕೀಡು ಮಾಡಿತ್ತು. ಅಂದು ತಮನ್ನಾ ಇದ್ಯಾವುದಕ್ಕೂ ಸ್ಪಷ್ಟ ಉತ್ತರ ಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ "ಲಾಲ್ಲನ್​ಟಾಪ್​" ಸಂದರ್ಶನದಲ್ಲಿ ಉತ್ತರಿಸಿದ ಮಿಲ್ಕಿ ಬ್ಯೂಟಿ, "ಈ ಇಂಟರ್​ನೆಟ್​ ಒಂದು ರೀತಿ ಹಾಸ್ಯ ತಾಣ. ಅದರ ಪ್ರಕಾರ, ನನಗೆ ಅದಾಗಲೇ ರಜಾಕ್​ರೊಂದಿಗೆ ಮದುವೆ ಆಗಿಬಿಟ್ಟಿತ್ತು. ನಿಜಕ್ಕೂ ಇದು ನನ್ನನ್ನು ಬಹಳ ಬೇಸರಕ್ಕೆ ದೂಡಿತ್ತು" ಎಂದಿದ್ದಾರೆ.

ವಿರಾಟ್​ ಜತೆ ಲವ್ವಿಡವ್ವಿ

ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್​ ವಿರಾಟ್ ಕೊಹ್ಲಿ ಜತೆಗೆ ತಮನ್ನಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಈ ಹಿಂದೆ ದೊಡ್ಡ ವದಂತಿಯೇ ಜಾಲತಾಣಗಳಲ್ಲಿ ಹರಿದಾಡಿತ್ತು. ಶೀಘ್ರವೇ ಇವರಿಬ್ಬರು ದಾಂಪತ್ಯಕ್ಕೂ ಕಾಲಿಡುತ್ತಾರೆ ಎನ್ನಲಾಗಿತ್ತು. ಈ ವಿಚಾರಕ್ಕೂ ಸ್ಪಷ್ಟನೆ ಕೊಟ್ಟ ತಮನ್ನಾ ಭಾಟಿಯಾ, "ಅಂದು ನಾನು ಮತ್ತು ಕೊಹ್ಲಿ ಯಾವುದೋ ಒಂದು ಆ್ಯಡ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೆವು ಅಷ್ಟೇ. ಅದನ್ನೇ ಲಿಂಕ್ ಮಾಡಿ, ನಮ್ಮಿಬ್ಬರ ನಡುವೆ ಇಲ್ಲದ ಸಂಬಂಧವನ್ನು ಇದೆ ಎಂದು ಬಿಂಬಿಸಿದ್ದರು. ಇದಂತು ನನಗೆ ಬಹಳ ಬೇಸರ ತಂದಿತ್ತು. ಯಾಕಂದ್ರೆ, ಅದೊಂದರಲ್ಲೇ ನಾನು ವಿರಾಟ್​ನ ನೇರವಾಗಿ ಭೇಟಿಯಾಗಿದ್ದು. ಅದನ್ನು ಹೊರತುಪಡಿಸಿದರೆ, ಇನ್ನೆಲ್ಲೂ ಅವರನ್ನು ಮೀಟ್ ಮಾಡಲು ಆಗಿಲ್ಲ" ಎಂದು ಹೇಳಿದ್ದಾರೆ.

ಸಂಬಂಧ ಇಲ್ಲದವರ ಜತೆ ಹೇಗೆ?

"ನನಗೆ ಸಂಬಂಧವಿಲ್ಲದ ವ್ಯಕ್ತಿಗಳೊಂದಿಗೆ ನನ್ನನ್ನು ತಳುಕು ಹಾಕುತ್ತೀರಿ ಎಂದರೆ ನಾನೇನು ಹೇಳಬೇಕು? ಮೀಡಿಯಾಗಳು ಈ ರೀತಿ ಗೊತ್ತಿಲದವರನ್ನು ನನ್ನ ಹೆಸರಿನ ಜೊತೆಗೆ ಸೇರಿಸುವುದನ್ನು ನೋಡಿದಾಗ ತೀರ ಮುಜುಗರ ಉಂಟು ಮಾಡುತ್ತದೆ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net