'ಅಂತಹ ವಿಷಯಗಳ ಕಡೆ ಗಮನ ಹರಿಸಲ್ಲ': ಹೀಗಂದಿದ್ದೇಕೆ ಮಿಲ್ಕಿ ಬ್ಯೂಟಿ ತಮನ್ನಾ?

tamanna
Published on

ಮುಂಬೈ: ನಟಿ ತಮನ್ನಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಂತ್ರಜ್ಞಾನ ದುರುಪಯೋಗವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ದಕ್ಷಿಣ ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, “ಸೆಲೆಬ್ರಿಟಿಗಳ ವಿಚಾರದಲ್ಲಿ ಸತ್ಯ ಗೊತ್ತಿಲ್ಲದೆ ಯಾರ್ಯಾರೋ ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸ್ತಾರೆ. ನಮ್ಮ ಜೀವನದಲ್ಲಿ ಏನಾಗುತ್ತೆ ಅಂತಾನೂ ಹೇಳ್ತಾರೆ..ಅಂಥ ವಿಷಯಗಳ ಬಗ್ಗೆ ನಾನು ಗಮನಹರಿಸುವುದಿಲ್ಲ ಎಂದರು.

ಅಂತಹವರ ಬಗ್ಗೆ ಯೋಚಿಸಿದರೆ ನಾವೇ ಪ್ರೊತ್ಸಾಹಿಸಿದಂತಾಗುತ್ತದೆ. ಹಾಗಾಗಿ ನಾನು ಅಂತಹವರ ಕಡೆ ಗಮನ ಹರಿಸುವುದಿಲ್ಲ. ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸುತ್ತೇನೆ ಎಂದರು.

ನನಗೆ ಟಾಲಿವುಡ್ ಮತ್ತು ಬಾಲಿವುಡ್ ಎರಡೂ ಸಮಾನ. ನಾನು ಮುಂಬೈನಲ್ಲಿ ಇದ್ದೇನೆ. ನಾನು ಹುಟ್ಟಿ ಬೆಳೆದಿದ್ದೇ ಮುಂಬೈನಲ್ಲಿ. ನನ್ನ ಚಿತ್ರರಂಗದ ವೃತ್ತಿಜೀವನ ಆರಂಭವಾದದ್ದು ದಕ್ಷಿಣದ ಚಿತ್ರಗಳಿಂದ.ಈ ಎರಡು ಪ್ರದೇಶಗಳನ್ನು ನನ್ನ ಮನೆ ಎಂದು ಪರಿಗಣಿಸುತ್ತೇನೆ ಎಂದು ಹೇಳಿದರು.

ಕಲಾವಿದರು ಭಾಷೆ ಅಥವಾ ಪ್ರದೇಶಕ್ಕೆ ಸೀಮಿತರಾದವರಲ್ಲ. ಅವರು ನಿರಂತರವಾಗಿ ಪ್ರಯಾಣಿಸಬೇಕು. ಪ್ರೇಕ್ಷಕರನ್ನು ರಂಜಿಸುವುದು ನಮ್ಮ ಕೆಲಸ ಎಂದು ತಮನ್ನಾ ಹೇಳಿದ್ದಾರೆ.

ತಮನ್ನಾ ಪ್ರಸ್ತುತ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ 'ಸ್ತ್ರೀ 2' ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಅಮರ್ ಕೌಶಿಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net