ಹಾಟ್​ಲುಕ್​ನಲ್ಲಿ ಕಾಣಿಸಿಕೊಂಡ ತಮನ್ನಾ ಭಾಟಿಯಾ; ಬಾರ್ಬಿ ಡಾಲ್​ ಎಂದ ಫ್ಯಾನ್ಸ್!​ | Tamannaah

dk - 2025-03-02T211319.646
Published on

Tamannaah:ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್​ನಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ತನ್ನ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಕೆಲವಷ್ಟು ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಆ ಚಿತ್ರಗಳು ಸೋಷಿಯಲ್​ ಮೀಡಿಯಾದ ಸಖತ್​ ಆಗಿ ವೈರಲ್​ ಆಗುತ್ತಿದೆ.

ಹೌದು, ತಮನ್ನಾ ಭಾಟಿಯಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಚಿತ್ರಗಳಲ್ಲಿ ಎಲ್ಲರ ಗಮನ ಸೆಳೆದರು, ಆಕರ್ಷಕವಾದ ಬಿಳಿ ಗೌನ್ ತೊಟ್ಟಿಎರುವ ಅವರು ಮಾದಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಅವರ ಈ ಡ್ರೆಸ್‌ನಲ್ಲಿ ವೈಟ್ ಸ್ಟೈಲ್ ನೆಕ್‌ಲೈನ್ ಮತ್ತು ಉದ್ದನೆಯ ತೋಳುಗಳಿವೆ. ಕಪ್ಪು ಹೂವುಗಳಿವೆ. ಈ ಡ್ರೆಸ್‌ನಲ್ಲಿ ತಮನ್ನಾ ಮುದ್ದಾಗಿ ಕಾಣುತ್ತಿದ್ದಾರೆ.

ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಲ್ಲದೆ, ತರೇಹವಾರಿ ಭರಪೂರ ಕಾಮೆಂಟ್​ಗಳು ಹರಿದು ಬರುತ್ತಿವೆ. ಕೆಲವರು ಅಪ್ಸಾರೆ ಎಂದರೆ ಇನ್ನು ಕೆಲವರು ಮಿಲ್ಕಿ ಬ್ಯೂಟಿಗೆ ಅರ್ಥ ಕೊಟ್ಟಿದ್ದೀರಿ ಎಂದಿದ್ದಾರೆ.

ಸ್ಟೈಲಿಸ್ಟ್ ಅಮಿ ಪಟೇಲ್ ಮತ್ತು ಡಿಸೈನರ್ ಜೋಡಿ ಗೌರಿ, ಮತ್ತು ನೈನಿಕಾ ಅವರ ಸಹಯೋಗದೊಂದಿಗೆ ಈ ಗೌನ್​ ವಿನ್ಯಾಸಗೊಳಿಸಲಾಗಿದೆ. ಇನ್ನು ತಮನ್ನಾ ಸಿನಿಮಾ ವಿಚಾರಕ್ಕೆ ಬರುವುದಾರೆ ಒಡೆಲಾ-2 ಟೀಸರ್​ ಬಿಡುಗಡೆಗೊಂಡಿದ್ದು, ಭಾರೀ ರೆಸ್ಪಾನ್ಸ್​ ಬರುತ್ತಿದೆ. ಈ ಸಿನಿಮಾ ಮೇಲೆ ಚಿತ್ರರತಂಡಕ್ಕೆ ಭಾರಿ ನಿರೀಕ್ಷೆ ಇದೆ.ಅಲ್ಲದೆ, ಒಡೆಲಾ-2 ಬಿಡುಗಡೆ ಬಗ್ಗೆ ಚಿತ್ರತಂಡ ಶ್ರೀಘ್ರದಲ್ಲಿಯೇ ದಿನಾಂಕ ಘೋಷಿಸಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net