ಆ ವಜ್ರದ ಉಂಗುರದ ಹಿಂದಿನ ಕಥೆ ರಿವೀಲ್ ಮಾಡಿದ ತಮನ್ನಾ, ಪೆಚ್ಚಾದ ಫ್ಯಾನ್ಸ್

tamanna
Published on

ಬೆಂಗಳೂರು: ಚಿತ್ರರಂಗದ ಸೆಲೆಬ್ರಿಟಿಗಳ ಬಗ್ಗೆ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಆದರೆ ಅವರು ಪ್ರತಿಕ್ರಿಯಿಸುವವರೆಗೂ ಅವು ನಿಜವೋ ಸುಳ್ಳೋ ಎಂಬುದು ಗೊತ್ತಾಗುವುದಿಲ್ಲ. ಇತ್ತೀಚೆಗಷ್ಟೇ ಮಿಲ್ಕಿ ಬ್ಯೂಟಿ ತಮನ್ನಾ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಕೆ ವಿಶ್ವದ ಅತಿ ದೊಡ್ಡ ವಜ್ರದ ಉಂಗುರವನ್ನು ಹೊಂದಿದ್ದಾರೆ ಎಂಬ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ತಮನ್ನಾ ಇತ್ತೀಚೆಗಷ್ಟೇ ವಜ್ರದ ಉಂಗುರದ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಪೂಜಾ ಉಡುಗೊರೆ
ತಮನ್ನಾ ಬಳಿ ವಿಶ್ವದ ಅತಿ ದೊಡ್ಡ ವಜ್ರದ ಉಂಗುರವಿದೆ ಎಂದು ವರದಿಯಾಗಿದೆ, ಇದರ ಬೆಲೆ ಸುಮಾರು 2 ಕೋಟಿ ರೂ.ಇದ್ದು, ರಾಮ್ ಚರಣ್ ಪತ್ನಿ ಆ ವಜ್ರದ ಉಂಗುರವನ್ನು ತಮನ್ನಾಗೆ ಪೂಜಾ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಪ್ರಚಾರವೂ ಇತ್ತು. 2019 ರಲ್ಲಿ ತೆರೆಕಂಡ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ತಮನ್ನಾ ಅಭಿನಯವನ್ನು ಶ್ಲಾಘಿಸಿದ ಉಪಾಸನಾ ಅವರು ಆ ದುಬಾರಿ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಲಾಗಿತ್ತು. ಆ ಸಮಯದಲ್ಲಿ ತಮನ್ನಾ ಮತ್ತು ಉಪಾಸನಾ ಒಟ್ಟಿಗೆ ತೆಗೆಸಿಕೊಂಡ ಫೋಟೋಗಳಲ್ಲಿ ಆ ವಜ್ರದ ಉಂಗುರವನ್ನು ಧರಿಸಿದ್ದರು. ಆದ್ದರಿಂದ ಎಲ್ಲರೂ ಈ ಸುದ್ದಿ ನಿಜ ಎಂದು ಭಾವಿಸಿದ್ದರು.

ಬಾಟಲಿ ಓಪನರ್‌
ಇತ್ತೀಚೆಗೆ ತಮನ್ನಾ ಆ ವಜ್ರದ ಉಂಗುರದ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ. "ಇದು ಹೇಳಲು ದುಃಖಕರ. ಆ ದಿನ ನಾವು ಕೇವಲ ಬಾಟಲಿ ಓಪನರ್‌ನಿಂದ ಫೋಟೋ ಶೂಟ್ ಮಾಡಿದ್ದೇವೆ. ನನ್ನ ಬೆರಳಿಗೆ ನಾನು ಧರಿಸಿರುವುದು ನಿಜವಾದ ವಜ್ರವಲ್ಲ. ಇದು ಬಾಟಲ್ ಓಪನರ್,'' ಎಂದು ಫೋಟೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ ತಮನ್ನಾ. ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಸರಣಿ ಸಿನಿಮಾಗಳಲ್ಲಿ ಫುಲ್ ಬ್ಯುಸಿ..
ತಮನ್ನಾ ಇಂಡಸ್ಟ್ರಿಗೆ ಬಂದು ಹಲವು ವರ್ಷಗಳು ಕಳೆದರೂ ಅದೇ ಗ್ಲಾಮರ್‌ನೊಂದಿಗೆ ಸಾಲು ಸಾಲು ಅವಕಾಶ ಪಡೆಯುತ್ತಿದ್ದಾರೆ. ತಮನ್ನಾ ಇತ್ತೀಚೆಗೆ ಬಾಲಿವುಡ್‌ನಲ್ಲಿ 'ಲಸ್ಟ್ ಸ್ಟೋರೀಸ್ 2' ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಗ್ಲಾಮರ್ ಮೂಲಕ ಯುವಜನತೆಯನ್ನು ಸೆಳೆದರು. ‘ಜೀ ಕರ್ದಾ’ ಎಂಬ ವೆಬ್ ಸಿರೀಸ್ ನಲ್ಲೂ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ‘ಭೋಲಾ ಶಂಕರ್’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಗವಾಗಿ ಸಾಗುತ್ತಿದೆ. ಈಗಾಗಲೇ ಸಿನಿಮಾದಿಂದ ಬಿಡುಗಡೆಯಾಗಿರುವ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಕೂಡ ನಟಿಸುತ್ತಿದ್ದಾರೆ. ಅಲ್ಲದೆ, ರಜನಿಕಾಂತ್ ಅವರ ಮುಂಬರುವ ಚಿತ್ರ 'ಜೈಲರ್' ನಲ್ಲಿಯೂ ತಮನ್ನಾ ನಟಿಸಿದ್ದಾರೆ. ಇದಲ್ಲದೆ, ತಮನ್ನಾ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಭಾಗವಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net