More

    ಆಪ್ ಸಂಸದ ರಾಘವ್ ಚಡ್ಡಾ ಮೇಲೆ ಕಾಗೆ ದಾಳಿ; ಬಿಜೆಪಿ ವ್ಯಂಗ್ಯ, ಹೆಚ್ಚೆಚ್ಚು ರೀ ಟ್ವೀಟ್, ಲೈಕ್ ಪಡೆಯುತ್ತಿರುವ ಪೋಸ್ಟ್…

    ನವ ದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರು ಮಂಗಳವಾರ ಸಂಸತ್ತಿನ ಆವರಣದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಕಾಗೆಯೊಂದು ದಾಳಿ ಮಾಡಿದೆ. ಸುದ್ದಿ ಸಂಸ್ಥೆ ಪಿಟಿಐ ಛಾಯಾಗ್ರಾಹಕರೊಬ್ಬರು ಈ ಕ್ಷಣವನ್ನು ಸೆರೆಹಿಡಿದಿದ್ದು, ಫೋಟೋಗಳು ಶೀಘ್ರದಲ್ಲೇ ಅಂತರ್ಜಾಲದಲ್ಲಿ ವೈರಲ್ ಆಗಿವೆ.

    ಫೋಟೋಗಳಲ್ಲಿ ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸಿದ ನಂತರ ಸದನದಿಂದ ಹೊರಬರುವಾಗ ಕಾಗೆಯೊಂದು ಚಡ್ಡಾ ಅವರ ತಲೆಯ ಮೇಲೆ ಹಾರುತ್ತಿದೆ. ನಂತರ ಅವರ ತಲೆಯ ಮೇಲೆ ಕುಕ್ಕುವುದನ್ನು ನೋಡಬಹುದು. ಕೊನೆಗೆ ಗಾಬರಿಯಾದ ಚಡ್ಡಾ ಕೆಳಗೆ ಬಾಗಿದ್ದಾರೆ.

    ಟ್ವಿಟ್ಟರ್‌ನಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ ದೆಹಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) “ಜೂಟ್ ಬೋಲೆ ಕೌವಾ ಕಾಟೆ ” (ಕಾಗೆ ಸುಳ್ಳುಗಾರನನ್ನು ಕಚ್ಚುತ್ತದೆ) ಎಂದು ಎಎಪಿ ನಾಯಕನನ್ನು ಲೇವಡಿ ಮಾಡಿ ಟ್ವೀಟ್ ಮಾಡಿದೆ. “ನಾವು ಇಂದಿನವರೆಗೂ ಕೇಳಿದ್ದೆವು, ಆದರೆ ಇಂದು ನಾವು ನೋಡಿದ್ದೇವೆ, ಕಾಗೆಯು ಸುಳ್ಳುಗಾರನನ್ನು ಕಚ್ಚುತ್ತದೆ!” ಎಂದು ಪೋಸ್ಟ್ ಮಾಡಲಾಗಿದೆ.

    ಈ ಟ್ವೀಟ್​​​ 4,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸುಮಾರು 1,400 ರೀಟ್ವೀಟ್‌ಗಳನ್ನು ಪಡೆದಿದ್ದು, ಈ ಪೋಸ್ಟ್ ಕೆಲವು ನೆಟ್ಟಿಗರನ್ನು ಚಿಂತೆಗೀಡು ಮಾಡಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು ಚಡ್ಡಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ. “ಹೃದಯವು ತುಂಬಾ ಅಸಮಾಧಾನಗೊಂಡಿದೆ, ಇದು ಕೆಟ್ಟ ಶಕುನ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

    ಭಾರಿ ಮಳೆ ತಂದ ಅವಾಂತರ; ಮನೆಗೆ ನುಗ್ಗಿದ ಹಾವನ್ನು ನೇರವಾಗಿ ಜಿಎಚ್‌ಎಂಸಿ ಕಚೇರಿಗೆ ತಂದು ಬಿಟ್ಟ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts