ರಾಜೇಶ್ವರಿ ಕಾಲೇಜ್​ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವೀರಾಗ್ರಣಿ

8-RNR-09
Published on

ರಾಣೆಬೆನ್ನೂರ: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಸಂಗಮೇಶ್ವರ ಪದವಿಪೂರ್ವ ಕಾಲೇಜ್​ನಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ನಗರದ ಕೆಎಲ್​ಇ ಸಂಸ್ಥೆಯ ರಾಜರಾಜೇಶ್ವರಿ ಹೆಣ್ಣುಮಕ್ಕಳ ಸಂಯುಕ್ತ ಪದವಿಪೂರ್ವ ಕಾಲೇಜ್​ನ ವಿದ್ಯಾಥಿರ್ನಿಯರು ವೀರಾಗ್ರಹಣಿಯಾಗಿ ಹೊರಹೊಮ್ಮಿದ್ದಾರೆ.

ಗುಂಪು ಆಟಗಳಾದ ಖೋಖೋ, ಬಾಲ್​ ಬ್ಯಾಡ್ಮಿಂಟನ್​, ಥ್ರೋಬಾಲ್​ ಹಾಗೂ 4*400 ರೀಲೆನಲ್ಲಿ ಪ್ರಥಮ ಸ್ಥಾನ ಹಾಗೂ ವಾಲಿಬಾಲ್​ನಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಆಟಗಳಾದ ಐಶ್ವರ್ಯ ಮಾಕನೂರ 1500 ಓಟದಲ್ಲಿ ಮೀಟರ್​ ಪ್ರಥಮ ಸ್ಥಾನ, ಲಕ್ಷಿ$್ಮ ಮೋಟೆಬೆನ್ನೂರ ಗುಂಡು ಎಸೆತ ಪ್ರಥಮ ಸ್ಥಾನ, ಶೀವಲಿಲಾ ಮಕರಬ್ಬಿ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಮತ್ತು 400, 800 ಮೀಟರ್​ ಓಟದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾಳೆ.

ಸಂಗಿತಾ ತಳಗೇರಿ 3000 ಮೀಟರ್​ ಓಟದಲ್ಲಿ ದ್ವೀತಿಯ ಸ್ಥಾನ, ಶಶಿಕಲಾ ಹಿತ್ತಲಮನಿ ವೇಗದ ನಡಿಗೆಯಲ್ಲಿ ದ್ವೀತಿಯ ಸ್ಥಾನ, ದೀಪಾ ಯಲ್ಲಾಪುರ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜ್​ನ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net