ಮೂಡುಬಿದಿರೆ ತಾಲೂಕುಮಟ್ಟದ ದಸರಾ ಕ್ರೀಡಾಕೂಟ

Mdb_Dasara-tournament
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮೈಸೂರು ದಸರಾ ಪ್ರಯುಕ್ತ ಸ್ವರಾಜ್ಯ ಹಾಗೂ ವಿದ್ಯಾಗಿರಿ ಮೈದಾನದಲ್ಲಿ ನಡೆದ ತಾಲೂಕುಮಟ್ಟದ ವಿವಿಧ ಗುಂಪು ಆಟಗಳು ಮತ್ತು ವೈಯಕ್ತಿಕ ಕ್ರೀಡೆಗಳಲ್ಲಿ ಆಳ್ವಾಸ್​ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಪ್ರಥಮ ಸ್ಥಾನ ಪಡೆದ ತಂಡಗಳು ಮತ್ತು ವೈಯಕ್ತಿಕ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

*ಫಲಿತಾಂಶ: ಪುರುಷರ ವಿಭಾಗ: ಥ್ರೋಬಾಲ್​ ವಿಭಾಗದಲ್ಲಿ ಬೆದ್ರ ಫ್ರೆಂಡ್ಸ್​ ಪ್ರಥಮ ಸ್ಥಾನ, ಸ್ವಾಮಿ ವಿವೇಕಾನಂದ ಎಡಪದವು ದ್ವೀತಿಯ, ಕಬಡ್ಡಿಯಲ್ಲಿ ಆಳ್ವಾಸ್​ ಪ್ರಥಮ, ಎಂ.ಕೆ.ಅನಂತರಾಜ ಆಫ್​ ಫಿಸಿಕಲ್​ ಎಜುಕೇಶನ್​ ದ್ವೀತಿಯ, ವಾಲಿಬಾಲ್​ ವಿಭಾಗದಲ್ಲಿ ಆಳ್ವಾಸ್​ ಪ್ರಥಮ, ವಿದ್ಯಾಗಿರಿ ದ್ವೀತಿಯ, ಖೋ&ಖೋ ವಿಭಾಗದಲ್ಲಿ ಆಳ್ವಾಸ್​ ಪ್ರಥಮ, ಸ್ಟಾರ್​ ಬಾಯ್ಸ್​ ದ್ವೀತಿಯ ಸ್ಥಾನ, ಫುಟ್​ಬಾಲ್​ ವಿಭಾಗದಲ್ಲಿ ಜೈನ್​ ಪಿಯು ಕಾಲೇಜು ಪ್ರಥಮ, ಮಹಾವೀರ ಕಾಲೇಜು ದ್ವೀತಿಯ ಸ್ಥಾನ ಪಡೆದಿದೆ.

*ಮಹಿಳಾ ವಿಭಾಗ: ಥ್ರೋಬಾಲ್​ ವಿಭಾಗದಲ್ಲಿ ಆಳ್ವಾಸ್​ ಪ್ರಥಮ, ತುಳುನಾಡು ಯುನೈಟೆಡ್​ ದ್ವೀತಿಯ, ಕಬಡ್ಡಿ ವಿಭಾಗದಲ್ಲಿ ಆಳ್ವಾಸ್​ ಪ್ರಥಮ, ಮಹಾವೀರ ಕಾಲೇಜು ದ್ವೀತಿಯ, ವಾಲಿಬಾಲ್​ ವಿಭಾಗದಲ್ಲಿ ಆಳ್ವಾಸ್​ ಪ್ರಥಮ, ಜೈನ್​ ಪಿಯು ಕಾಲೇಜು ದ್ವೀತಿಯ, ಖೋ&ಖೋ ವಿಭಾಗದಲ್ಲಿ ಆಳ್ವಾಸ್​ ಪ್ರಥಮ, ತೆಂಕಮಿಜಾರು ದ್ವೀತಿಯ, ಯೋಗ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ಟ್ರೆಡಿಷನಲ್​ ಮತ್ತು ಆರ್ಟಿಸ್ಟಿಕ್​ನಲ್ಲಿ ಆಳ್ವಾಸ್​ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದಿದೆ.

ಅಥ್ಲೆಟಿಕ್ಸ್​ ಕ್ರೀಡಾಕೂಟದಲ್ಲಿ 31 ಚಿನ್ನ, 29 ಬೆಳ್ಳಿ, 22 ಕಂಚು ಒಟ್ಟು 82 ಪದಕಗಳನ್ನು ಆಳ್ವಾಸ್​ ಪಡೆದಿದೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net