ಸ್ವಚ್ಛತಾ ಹಿ ಸೇವಾ ಅಭಿಯಾನ: ಜಿಲ್ಲಾಧಿಕಾರಿ ಚಾಲನೆ

Ksd_sasi
Published on

ಕಾಸರಗೋಡು: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಇತ್ತೀಚೆಗೆ ಜರುಗಿತು.

ಲೀಡ್​ ಬ್ಯಾಂಕ್​ ಹಾಗೂ ಕೆನರಾ ಬ್ಯಾಂಕ್​ ಪ್ರಾದೇಶಿಕ ಕಚೇರಿ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್​ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆನರಾ ಬ್ಯಾಂಕ್​ ಕೊಯಿಕ್ಕೋಡ್​ ಸರ್ಕಲ್​ ಕಚೇರಿಯ ಎಜಿಎಂ ಬಿಪುಲ್​ ಚಂದ್ರ ಸಾಹಾ, ಕಾಸರಗೋಡು ಕೆನರಾ ಬ್ಯಾಂಕ್​ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಅಂಶುಮಾನ್​ ಡಿ. ಉಪಸ್ಥಿತರಿದ್ದು, ಸಿವಿಲ್​ ಸ್ಟೇಶನ್​ ವಠಾರದಲ್ಲಿ ಸಸಿ ನೆಟ್ಟರು.

ಕಾಸರಗೋಡು ಲೀಡ್​ ಬ್ಯಾಂಕ್​ ಜಿಲ್ಲಾ ಮ್ಯಾನೇಜರ್​ ತಿಪ್ಪೇಶ್​ ಹಾಗೂ ಬ್ಯಾಂಕ್​ ಉದ್ಯೋಗಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net