ಅತ್ತೆ ಮಾವ ವ್ಯಂಗ್ಯವಾಡಿದರೆ ಅದು ತಪ್ಪಲ್ಲ! ಗಂಡನ ಮನೆಯವರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ!

court
Published on

ಮುಂಬೈ: ಮದುವೆಯಾದ ಮೇಲೆ ಅತ್ತೆ ಮಾವ ವ್ಯಂಗ್ಯ ಮಾತುಗಳನ್ನು ಸೊಸೆಗೆ ಹೇಳಿದರೆ ಅಥವಾ ವ್ಯಂಗ್ಯವಾಗಿ ಮಾತನಾಡಿದರೆ ಅದು ತಪ್ಪಲ್ಲ ಎಂದು ಮುಂಬೈ ಸೆಷನ್ಸ್​ ನ್ಯಾಯಾಲಯ ಹೇಳಿದೆ. ಈ ರೀತಿ ಪ್ರಕರಣವೊಂದನ್ನು ಎದುರಿಸುತ್ತಿದ್ದ ವೈದ್ಧ ದಂಪತಿಗೆ ಜಾಮೀನು ನೀಡಲಾಗಿದೆ.

ಮದುವೆಯಾದ ಮೇಲೆ ವ್ಯಂಗ್ಯ ಮಾತುಗಳನ್ನು ಕೇಳುವುದು ದಾಂಪತ್ಯ ಜೀವನದ ಭಾಗವಾಗುತ್ತದೆ. ಅದ್ಕಕ್ಕೆಂದು ನ್ಯಾಯಾಲಯದ ಮೆಟ್ಟಿಲು ಹತ್ತಲಾಗದು ಎಂದು ನ್ಯಾಯಾಲಯ ತಿಳಿಸಿದೆ.

ಮಹಿಳೆಯೊಬ್ಬರು ದುಬೈನಲ್ಲಿ ವಿದ್ಯಾಭ್ಯಾಸ ನಡೆಸುವಾಗ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆತ ಮುಂಬೈನ ವೃದ್ಧ ದಂಪತಿಯ ಸಾಕು ಮಗ ಎನ್ನುವುದು ಮಹಿಳೆಗೆ ಮದುವೆಯ ಸಮಯದಲ್ಲಿ ತಿಳಿದುಬಂದಿತ್ತು. ಮದುವೆ ಆಗಿ ಮನೆಗೆ ಬಂದ ಸೊಸೆಗೆ ಅತ್ತೆ ಮಾವ ಹಿಂಸಿಸುತ್ತಿದ್ದರಂತೆ. ಫ್ರಿಜ್​ ಮುಟ್ಟಲು ಕೊಡುತ್ತಿರಲಿಲ್ಲವಂತೆ, ನಿನ್ನೆ ಮೊನ್ನೆ ಮಾಡಿದ್ದ ಅಡುಗೆಯನ್ನೇ ಊಟಕ್ಕೆ ಕೊಡುತ್ತಿದ್ದರಂತೆ. ರೂಮಿನಲ್ಲಿ ಮಲಗಲೂ ಬಿಡದೆ, ಹಾಲ್​ನಲ್ಲಿಯೇ ಮಲಗಲು ಹೇಳುತ್ತಿದ್ದರಂತೆ. ತವರಿಗೆ ಹೋಗಲೂ ಬಿಡುತ್ತಿರಲಿಲ್ಲ ಎಂದು ಮಹಿಳೆ ದೂರಿದ್ದಳು.

ದುಬೈನಿಂದ ಊರಿಗೆ ಬರುವಾಗ 15 ಕೆ.ಜಿ ಡ್ರೈಫ್ರೂಟ್ಸ್​ ಅನ್ನು ಅವರ ಮಗ ನನ್ನೊಂದಿಗೆ ಕಳುಹಿಸಿಕೊಟ್ಟಿದ್ದರು. ಅದನ್ನೂ ಕೂಡ ಅತ್ತೆ ಮಾವ ತೂಕ ಹಾಕಿ ಖಚಿತಪಡಿಸಿಕೊಂಡಿದ್ದರು ಎಂದು ಮಹಿಳೆ ಹೇಳಿದ್ದಾಳೆ.

ಸೊಸೆ ತಮ್ಮ ವಿರುದ್ಧ ದೂರು ನೀಡಿದ್ದಾಳೆ ಎನ್ನುವುದೇ ತಿಳಿದಿರದ ದಂಪತಿಗೆ ಅವರ ಬ್ಯಾಂಕ್​ ಖಾತೆಗಳನ್ನು ಹೋಲ್ಡ್​ ಮಾಡಿದ ನಂತರ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಇದೀಗ 80 ಮತ್ತು 75 ವರ್ಷದ ದಂಪತಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net