ಹಿಜಾಬ್ ಧರಿಸುತ್ತಿಲ್ಲವೆಂದು ಎನ್​ಜಿಓಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಷೇಧಿಸಿದ ತಾಲಿಬಾನ್ ಸರ್ಕಾರ!

Hijab Ban Afghan NGO
Published on

ಕಾಬುಲ್: ಅಫ್ಘಾನಿಸ್ತಾನದಲ್ಲಿರುವ ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್​ಜಿಓ) ಇನ್ನು ಮುಂದೆ ಮಹಿಳೆಯರು ಕೆಲಸ ಮಾಡಬಾರದು ಎಂದು ಹೊಸ ಆದೇಶವನ್ನು ಅಲ್ಲಿನ ತಾಲಿಬಾನ್ ಸರ್ಕಾರ ಹೊರಡಿಸಿದೆ. ಎನ್​ಜಿಓಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೂಚಿಸಲಾಗಿರುವ ವಸ್ತ್ರಸಂಹಿತೆಯಂತೆ ಹಿಜಾಬ್ ಧರಿಸುತ್ತಿಲ್ಲ ಎಂಬ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಾಲಿಬಾನ್ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.

ತಾಲಿಬಾನ್​ ಆರ್ಥಿಕ ಸಚಿವಾಲಯ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎನ್​ಜಿಓಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮಹಿಳಾ ಕೆಲಸಗಾರರನ್ನು ಕೂಡಲೇ ವಜಾ ಮಾಡುವಂತೆ ಆದೇಶ ರವಾನಿಸಿದೆ. ಒಂದು ವೇಳೆ ಮಹಿಳಾ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕದೇ ಇದ್ದಲ್ಲಿ ಎನ್​ಜಿಓಗಳ ಪರವಾನಿಗೆಯನ್ನು ರದ್ದು ಮಾಡುವುದಾಗಿ ತಿಳಿಸಿದೆ.

ತಾಲಿಬಾನ್ ಸರ್ಕಾರದ ಈ ನಡೆಗೆ ಇದೀಗ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ವಿಶ್ವಸಂಸ್ಥೆಯ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಈ ಆದೇಶಕ್ಕೆ ಕಿಡಿಕಾರಿದ್ದು, ಮಹಿಳೆಯರು ವಿಶ್ವದಾದ್ಯಂತ ಮಾನವೀಯ ಕೆಲಸಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಿರುವಾಗ ತಾಲಿಬಾನ್ ಸರ್ಕಾರದ ಈ ನಿರ್ಧಾರ ಅಪ್ಘಾನ್ ಮಹಿಳೆಯರಿಗೆ ವಿನಾಶಕಾರಿ ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net