ಅಭಿನಯಿಸಿದ 2 ಸಿನಿಮಾಗಳು ಫ್ಲಾಪ್​!; ನಟಿಗೆ ಫ್ಯಾನ್ಸ್ ಕೊಟ್ಟ ಸಲಹೆ ಏನು?

Untitled design (82)
Published on

ಮುಂಬೈ: 'ಏಜೆಂಟ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಾಕ್ಷಿ ವೈದ್ಯ, ಚಿತ್ರದಲ್ಲಿ ನಟ ಅಖಿಲ್ ಅಕ್ಕಿನೇನಿ ಅವರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲಗೊಂಡಿತು. ತದನಂತರ ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ಗಂಡೀವಾಧಾರಿ ಅರ್ಜುನ' ಚಿತ್ರವು ಕೂಡ ನಿರೀಕ್ಷಿಸಿದಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿಲ್ಲ.

ದುರದೃಷ್ಟವಶಾತ್ ಸಾಕ್ಷಿ ವೈದ್ಯ ನಟಿಸಿದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸೋಲನ್ನು ಕಂಡಿದೆ. ಎರಡು ಚಿತ್ರಗಳಲ್ಲಿಯೂ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನಟಿಗೆ ತಮ್ಮ ಅಭಿಮಾನಿಗಳು ಮತ್ತು ಪ್ರೀತಿ ಪಾತ್ರರಿಂದ ಮೆಚ್ಚುಗೆಗಳು ವ್ಯಕ್ತವಾಗಿದೆ. 'ಗಂಡೀವಾಧಾರಿ ಅರ್ಜುನ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸಾಕ್ಷಿ, ಸಿನಿಮಾ ಪೂರ ಹೆಚ್ಚಿನ ಅವಧಿ ಕಾಣಿಸಿಕೊಳ್ಳುವುದಿಲ್ಲ. ಈ ಸಂಗತಿ ಅವರ ಫ್ಯಾನ್ಸ್​ಗೆ ತೀವ್ರ ಬೇಸರ ಮೂಡಿಸಿದೆ.

ಆಕರ್ಷಕ ನೋಟ ಮತ್ತು ಪ್ರತಿಭೆಯಿದ್ದರೂ ಕೂಡ ನಟಿ ಇಲ್ಲಿಯವರೆಗೂ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಲು ಸಾಧ್ಯವಾಗಿಲ್ಲ. ಬ್ಯಾಕ್​ ಟು ಬ್ಯಾಕ್ ಸೋಲಿನ ಬೆನ್ನಲ್ಲೇ ಸಾಕ್ಷಿ ಅವರಿಗೆ ಹಿತೈಷಿಗಳು ಮತ್ತು ಅವರ ಅಭಿಮಾನಿಗಳು ಮುಂದಿನ ಚಿತ್ರಗಳಲ್ಲಿ ಪಾತ್ರಗಳ ಆಯ್ಕೆಯತ್ತ ಹೆಚ್ಚು ಗಮನಹರಿಸುವಂತೆ ಸಲಹೆಗಳನ್ನು ನೀಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಯ ಪ್ರಕಾರ, ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅಭಿನಯದ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಸಾಕ್ಷಿ ವೈದ್ಯ ಅವರಿಗೆ ಸ್ಟಾರ್​ ನಟನೊಂದಿಗೆ ತೆರೆ ಹಂಚಿಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಚಿತ್ರತಂಡ ಏನು ಹೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net