'ಲೆಜೆಂಡ್​ ಮತ್ತು ಅವರ ಮಗನೊಂದಿಗೆ ಸೆಲ್ಫೀ'; ವೈರಲ್​ ಆಯ್ತು ಚೆಸ್​ ಚಾಂಪಿಯನ್​ ಫೋಟೋ

Untitled design (81)
Published on

ನವದೆಹಲಿ: ಭಾರತದ ಯುವ ಚೆಸ್‌ ಚಾಂಪಿಯನ್​ ಆರ್‌. ಪ್ರಜ್ಞಾನಂದ ಅವರು ಎಫ್‌ಐಡಿಇ ಚೆಸ್‌ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ರಾಷ್ಟ್ರವ್ಯಾಪಿ ಗಮನ ಸೆಳೆದರು.

ಫೈನಲ್​ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಿದ ಪ್ರಜ್ಞಾನಂದ, ಕೆಲವೇ ಅಂತರದಲ್ಲಿ ಸೋಲುವ ಮುಖೇನ ರನ್ನರ್​ ಅಪ್​ ಸ್ಥಾನವನ್ನು ಪಡೆದುಕೊಂಡರು.

ಸದ್ಯ ಭಾರತದ ಆರ್. ಪ್ರಜ್ಞಾನಂದ ಇದೀಗ ದೇಶಾವ್ಯಾಪಿ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಧನೆ ಮಾಡಿದ್ದೀರಿ, ನಿಮಗೆ ನಮ್ಮ ಅಭಿನಂದನೆಗಳು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಹೆಸರಾಂತ ಚೆಸ್ ಛಾಯಾಗ್ರಾಹಕಿ ಮಾರಿಯಾ ಎಮೆಲಿಯಾನೋವಾ ಅವರು ಪ್ರಜ್ಞಾನಂದ ಮತ್ತು ಅವರ ತಾಯಿಯೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಪ್ರಜ್ಞಾನಂದ ಮತ್ತು ಅವರ ತಾಯಿಯ ಜತೆ ನಿಂತು ತೆಗೆದ ಫೋಟೋಗೆ, "ಲೆಜೆಂಡ್​ ಮತ್ತು ಅವರ ಮಗನೊಂದಿಗೆ ಸೆಲ್ಫೀ" ಎಂಬ ಶೀರ್ಷಿಕೆಯಡಿ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಈ ಛಾಯಾಚಿತ್ರಕ್ಕೆ ಟ್ವಿಟರ್​ನಲ್ಲಿ ಸಾಕಷ್ಟು ಲೈಕ್ಸ್​ ಮತ್ತು ಕಮೆಂಟ್​ಗಳು ಹರಿದುಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net