ಸರ್ಕಾರಿ ಕಾಲೇಜಿನಲ್ಲಿದೆ ಉತ್ತಮ ಸೌಲಭ್ಯ :ವಚನಾ ಪ್ರದೀಪ್ ಅರುವಗುತ್ತು ಹೇಳಿಕೆ

puraskara
Published on

ಕಡಬ: ಸರ್ಕಾರಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹಲವಾರು ಸೌಲಭ್ಯ ನೀಡಲಾಗುತ್ತಿದೆ ಎಂದು ಬೆಳಂದೂರು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ವಚನಾ ಪ್ರದೀಪ್ ಅರುವಗುತ್ತು ಹೇಳಿದರು.

ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ನೇತೃತ್ವದಲ್ಲಿ ಇತ್ತೀಚೆಗೆ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಭಟ್ ಪಿ. ಮಾತನಾಡಿ, ಕಾಲೇಜಿನಲ್ಲಿ ಸಾಂಸ್ಕೃತಿಕ, ಎನ್‌ಎಸ್‌ಎಸ್ ಹಾಗೂ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಒಳ್ಳೆಯ ಹೆಜ್ಜೆ ಇಡಲು ಅವಕಾಶ ಇದೆ ಎಂದರು. ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರವೀಣ್ ಕುಮಾರ್ ಕೆಡಂಜಿಗುತ್ತು, ಸಮಿತಿ ಸದಸ್ಯರಾದ ಸೀತಾರಾಮ ಗೌಡ ಮುಂಡಾಳ, ಶೀನಪ್ಪ ಗೌಡ ಬೈತಡ್ಕ, ಪ್ರವೀಣ್ ಕುಂಟ್ಯಾನ, ಸತೀಶ್ ಮಾರ್ಕಾಜೆ, ಜಲೀಲ್ ಬೈತಡ್ಕ, ಶುಭ ಆರ್.ನೋಂಡಾ, ಗೌರಿ ಕಾರ್ಲಾಡಿ, ಪ್ರಮುಖರಾದ ಅಚ್ಯುತ ಗೌಡ ಕಂಪ, ವಿದ್ಯಾರ್ಥಿ ಪ್ರತಿನಿಧಿಗಳಾದ ಕ್ಷಿತಿಜ್ ಎಂ, ಕಾರ್ತಿಕ್, ಎನ್‌ಎಸ್‌ಎಸ್ ಘಟಕ ನಾಯಕ ಮಹೇಶ್, ನಾಯಕಿ ಚೈತ್ರಾ ಉಪಸ್ಥಿತರಿದ್ದರು.

ಐಕ್ಯುಎಸಿ ಸಂಚಾಲಕ ಸ್ವಾಮಿ ಎಸ್. ಸ್ವಾಗತಿಸಿದರು. ಉಪನ್ಯಾಸಕ ಹನುಮಂತ ಗೌಡ ಡಿ.ಎಂ ವಂದಿಸಿದರು. ವಿದ್ಯಾರ್ಥಿಗಳಾದ ದೀಕ್ಷಾ ಮತ್ತು ಕಿರಣ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net