ಹಾರರ್ ಥ್ರಿಲ್ಲರ್​ 'ತಾಳಟ್ಟಿ' ಚಿತ್ರೀಕರಣ ಮುಕ್ತಾಯ

Talatti
Published on

ಬೆಂಗಳೂರು; ಸೆವೆನ್‌ಸ್ಟಾರ್ ಪ್ರೊಡಕ್ಷನ್ಸ್ ಮತ್ತು ಸೃಜನ ಮೀಡಿಯಾ ಹೌಸ್ ಸಹಕಾರದಲ್ಲಿ, ಕಲ್ಪತರು ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾರರ್, ಸಸ್ಪೆನ್ಸ್ ಕಥೆ ಹೊಂದಿದ ‘ತಾಳಟ್ಟಿ’ ಚಿತ್ರೀಕರಣ ಮುಕ್ತಾಯವಾಗಿದೆ.

ಹರ್ಷವರ್ಧನ್, ಹಯಾತ್‌ಖಾನ್, ರಾಕೇಶ್.ಡಿ, ದಿಲೀಪ್‌ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೊಡಿದ್ದು. ಗಿಲ್ಲಿ ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರೀತಿ, ಪ್ರೇಮ ಎಂದು ಯುವತಿಯರ ಹಿಂದೆ ಅಲೆದಾಡುವ ಪ್ರೇಮಿಗಳಿಗೆ ತಾನು ಬಯಸಿದ ಪ್ರೀತಿ ಸಿಕ್ಕರೆ ಸ್ವರ್ಗ, ಸಿಗದಿದ್ದರೆ ನರಕ. ಈ ಸ್ವರ್ಗ ಮತ್ತು ನರಕದ ಹಾದಿಗಳು ಜೋಡಿರಸ್ತೆ ಇದ್ದಂತೆ. ಈ ಎರಡು ದಾರಿಯ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಈ ಚಿತ್ರದಲ್ಲಿದೆ.

ಈ ಚಿತ್ರಕ್ಕೆ ಇಮ್ತಿಯಾಜ್‌ ಖಾನ್ ಹಾಗೂ ಅಶೋಕ್ ಹಣಗಿ ಛಾಯಾಗ್ರಹಣ ಮಾಡಿದ್ದಾರೆ. ರಕ್ಷಿತ್ ಜಿ. ಮಲ್ಲಪ್ಪ ಸಂಕಲನಕಾರ್ಯ ನಿರ್ವಹಿಸಿದ್ದಾರೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ. ನಾಯಕ ನಟನಾಗಿ ಯತೀಶ್, ನಾಯಕಿಯಾಗಿ ಪ್ರತಿಮಾ, ಹಯಾತ್ ಖಾನ್, ದೀಪಾ, ಬೇಬಿ ಕೃತಿ ನಟರಾಜ, ದಿಲೀಪ್‌ಕುಮಾರ್, ಸಿದ್ದು ಮಂಡ್ಯ, ಮೋನಿಷಾ, ಕಲಾ ಮಂಜುನಾಥ್, ಮಾದಪ್ಪ ಮಂಡ್ಯ, ಶ್ರೀನಿವಾಸ್ ಸೇರಿ ಹಲವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net