More

    ಉಸಿರಾಟದ ಸಮಸ್ಯೆ ಸುತ್ತ ಹೊಸಬರ ಸಿನಿಮಾ; ‘ಡಿಸೆಂಬರ್​ 24’ ರಂದು ನಡೆಯುವುದೇನು?

    ಬೆಂಗಳೂರು: ನೈಜ ಘಟನೆ ಆಧರಿಸಿದ “ಡಿಸೆಂಬರ್-24” ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ. ನಾಗರಾಜ್ ಎಂಜಿ ಗೌಡ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರಕ್ಕೆ ಎ.ದೇವು ಹಾಸನ್, ವಿ.ಬೆಟ್ಟೇಗೌಡ ಬಂಡವಾಳ ಹಾಕಿದ್ದಾರೆ.

    ಇದನ್ನೂ ಓದಿ: VIDEO | ಮುತ್ತಯ್ಯ ಮುರಳೀಧರನ್ ಬಯೋಪಿಕ್ ಹೆಸರು, ಮೋಷನ್ ಪೋಸ್ಟರ್ ಅನಾವರಣ

    ಉಸಿರಾಟ ಸಮಸ್ಯೆಯಿಂದ ಸಾಯುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಆ ನೈಜ ಘಟನೆಗೆ ಸಿನಿಮಾ ರೂಪ ನೀಡಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಗೌಡ.

    ದೇಶದಲ್ಲಿ ಪ್ರತಿದಿನ ಹುಟ್ಟುವ ನೂರುಲ್ಲಿ ಮಕ್ಕಳು ಮೂರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾಯುತ್ತಿವೆ. ಇದಕ್ಕೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಇಂತಹದೊಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ

    ಇದನ್ನೂ ಓದಿ: ‘ಆಗ ಸಫರ್​ ಆಗೋ ಜೋಕರ್​ ನೀವೇ..’; ನಟ ರಮೇಶ್​ ಅರವಿಂದ್ ‘ಗುರಿ’ ಇಟ್ಟು ಹೇಳಿದ್ದು ಯಾರಿಗೆ?

    2015ರಿಂದ 2019 ರ ಅವಧಿಯಲ್ಲಿ ನಡೆದ ಕೆಲವು ಘಟನೆಗಳನ್ನು ಸೇರಿಸಿ ಪಕ್ಕಾ ಫ್ಯಾಮಿಲಿ, ಲವ್, ಸ್ನೇಹ ಹೀಗೆ ಎಲ್ಲ ಅಂಶಗಳನ್ನು ಸೇರಿಸಿ ಈ ಸಿನಿಮಾ ಮಾಡಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕರು. ನಾಯಕರಾಗಿ ಅಪ್ಪು ಬಡಿಗೇರ, ರವಿ ಕೆ ಆರ್ ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್ ಜಿ ದೊಡ್ಡಿ, ಪೂಜಾ ,ಜಿ.ಸಂಹಿತಾ ಅರಣ್ಯ, ಭೂಮಿಕಾ ರಮೇಶ್ ಅಭಿನಯಿಸುತ್ತಿದ್ದಾರೆ. ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ಮಾಡುವ ಸಾಧ್ಯತೆಗಳಿವೆ.
    ಚಿತ್ರದ 4 ಹಾಡುಗಳಿಗೆ ಪ್ರವೀಣ್ ನಿಕೇತನ್ ಸಂಗೀತ, ವಿನಯ್ ಗೌಡ ಛಾಯಾಗ್ರಹಣವಿದೆ. ಆನಂದ್ ಪಟೇಲ್ ಹುಲಿಕಟ್ಟೆ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರೀಕರಣವೂ ಮುಗಿಯಿತು, ಡಾಲಿ ಕಡೆಯಿಂದ ಉಡುಗೊರೆಯೂ ಸಿಕ್ಕಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts