ತಲಪಾಡಿ ಶಾರದಾ ಪ್ರೀಮಿಯರ್ ಲೀಗ್

cricket
ತಲಪಾಡಿ ಶಾರದಾ ಕಾಲೇಜಿನ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಶಾರದಾ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ರಾಯಲ್ ಸ್ಟ್ರೈಕರ್ಸ್ ಪ್ರಥಮ ಸ್ಥಾನ ಗಳಿಸಿತು.
Published on

ಉಳ್ಳಾಲ: ತಲಪಾಡಿ ಶಾರದಾ ಕಾಲೇಜಿನಲ್ಲಿ ಶಾರದಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-3 ಶನಿವಾರ ಕಾಲೇಜಿನ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯಿತು.

ಶಾರದಾ ವಸತಿ ಶಾಲೆಯ ಹಿರಿಯ ಪ್ರಾಂಶುಪಾಲ ಸುಷ್ಮಾ ದಿನಕರ್ ನೆರವೇರಿಸಿದರು. ಕ್ರೀಡೆಯಲ್ಲಿ 6 ತಂಡಗಳು ಹಾಗೂ 84 ಆಟಗಾರರು ಭಾಗವಹಿಸಿದ್ದರು. ರಾಯಲ್ ಸ್ಟ್ರೈಕರ್ಸ್ ಪ್ರಥಮ ಸ್ಥಾನ ಪಡೆದರೆ, ಫಿಯೋನಿಕ್ಸ್ ಟೈಟನ್ ಶಾರದಾ ರನ್ನರ್ಸ್ ಪ್ರಶಸ್ತಿ ಪಡೆದಿದೆ. ಫಿಯೋನಿಕ್ಸ್ ತಂಡದ ರಂಜಿತ್ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರೆ, ಉತ್ತಮ ದಾಂಡಿಗ ಮತ್ತು ಸರಣಿ ಪುರುಷ ಪ್ರಶಸ್ತಿ ಫಿಯೋನಿಕ್ಸ್ ತಂಡದ ಅಶೋಕ್ ಪಡೆದರು. ಪಂದ್ಯಪುರುಷ ಪ್ರಶಸ್ತಿ ರಾಯಲ್ ಸ್ಟ್ರೈಕರ್ಸ್ ತಂಡದ ಶಾಶ್ವತ್ ಪಡೆದುಕೊಂಡರು. ಪಂದ್ಯಾಟದಲ್ಲಿ ಶಾರದಾ ಯೋಗ ಮತ್ತು ನ್ಯಾಚುರೋಪತಿ, ಶಾರದಾ ಪದವಿಪೂರ್ವ ವಿದ್ಯಾರ್ಥಿಗಳು, ಶಾರದಾ ಪದವಿ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯೋಗ ನ್ಯಾಚುರೋಪತಿಯ ಪ್ರಾಂಶುಪಾಲ ಪ್ರೊ.ನಂದೀಶ್, ಆಡಳಿತ ಮಂಡಳಿಯ ವ್ಯವಸ್ಥಾಪಕ ವಿವೇಕ್ ತಂತ್ರಿ, ಪ್ರಾಂಶುಪಾಲ ಮೀನಾ ಜೆ.ಪಣಿಕ್ಕರ್, ಮೋಹನ್‌ದಾಸ್ ಮತ್ತು ಮೋಹನ್, ದೈಹಿಕ ಶಿಕ್ಷಕಿ ನೀತು ಕೆ.ಎಸ್ ಹಾಗೂ ಸಂಯೋಜಕ ಧರ್ಮಪಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net