ಮಾಸ್ಕ್​ ಧರಿಸದೆ ಹೊರ ಬಂದ ತಹಸೀಲ್ದಾರ್​ಗೆ ದಂಡ!

mask 23 mar 20
Published on

ಶಿವಮೊಗ್ಗ: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಾಸ್ಕ್​ ಧರಿಸದ ಕಾರಣಕ್ಕೆ ಹೊಸನಗರ ತಹಸೀಲ್ದಾರ್​ ಹಾಗೂ ಎಫ್​ಡಿಎಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ತಲಾ 200 ರೂ. ದಂಡ ವಿಧಿಸಿದ್ದಾರೆ.

ತಹಸೀಲ್ದಾರ್​ ರಾಜೀವ್​ ಹಾಗೂ ಬೈಕ್​ ಚಾಲನೆ ಮಾಡುತ್ತಿದ್ದ ಎಫ್​ಡಿಎ ಪ್ರದಿಪ್​ ಎಂಬುವವರು ದಂಡ ಕಟ್ಟಿದ್ದಾರೆ. ನಗರದ ಆಲ್ಕೊಳ ವೃತ್ತದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ತಹಸೀಲ್ದಾರ್​ ರಾಜೀವ್​ ನಿವಾಸ ಆಲ್ಕೊಳ ಸಮೀಪವೇ ಇದ್ದು ಪ್ರದಿಪ್​ ಜತೆ ಮಾಸ್ಕ್​ ಧರಿಸದೆ ಆಲ್ಕೊಳ ವೃತ್ತದಲ್ಲಿ ತೆರಳುತ್ತಿದ್ದಾಗ ತಡೆದ ಅಧಿಕಾರಿಗಳು ದಂಡ ಹಾಕಿದ್ದಾರೆ. ನಂತರ ರಾಜೀವ್​ ಅವರು ತಹಸೀಲ್ದಾರ್​ ಎಂಬುದು ಅಧಿಕಾರಿಗಳಿಗೆ ಅರಿವಾಗಿದೆ.

ಇತ್ತೀಚೆಗಷ್ಟೇ ಹೊಸನಗರ ತಹಸೀಲ್ದಾರ್​ ಆಗಿ ಅಧಿಕಾರ ಸ್ವೀಕರಿಸಿದ್ದ ಅವರು ವೈಯಕ್ತಿಕ ಕೆಲಸದ ನಿಮಿತ್ತ ಪ್ರದಿಪ್​ ಜತೆ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಇಬ್ಬರೂ ಮಾಸ್ಕ್​ ಧರಿಸಿರಲಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net