ಬೀದರ್​ನಲ್ಲೂ ತಬ್ಲಿಘಿ ಕರೊನಾ ಸೋಂಕಿತರ ಪುಂಡಾಟ, ಐಷಾರಾಮಿ ಸೌಲಭ್ಯಕ್ಕಾಗಿ ಒತ್ತಾಯ

tablighi
Published on

ಬೀದರ್​: ಕರೊನಾ ವೈರಸ್​ ಸೋಂಕಿನಿಂದ ಬಳಲುತ್ತಿರುವ ಶಂಕೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿರುವ ತಬ್ಲಿಘಿ ಜಮಾತ್​ನ ಸದಸ್ಯರು ಪುಂಡಾಟ ಮುಂದುವರಿಸಿದ್ದಾರೆ.

ಕರ್ತವ್ಯನಿರತ ವೈದ್ಯರು ಮತ್ತು ನರ್ಸ್​ಗಳ ಜತೆ ಅಸಭ್ಯವಾಗಿ ವರ್ತಿಸುತ್ತಾ ಕಿರಿಕಿರಿ ಮಾಡುತ್ತಿದ್ದಾರೆ. ಅಲ್ಲದೆ, ತಮಗೆ ಊಟಕ್ಕೆ ಅದೇ ಬೇಕು, ಇದೇ ಬೇಕು ಎಂದು ಹಟ ಹಿಡಿದು ಊಟ ಮಾಡಲು ನಿರಾಕರಿಸುತ್ತಿದ್ದಾರೆ.

ತಮ್ಮೆಲ್ಲರನ್ನೂ ಐಷಾರಾಮಿ ಕೊಠಡಿಗಳಲ್ಲಿ ಇರಿಸುವಂತೆ ಆಗ್ರಹಿಸುತ್ತಿದ್ದಾರೆ. ತಮ್ಮ ಈ ಬೇಡಿಕೆ ಈಡೇರಿಸದಿದ್ದರೆ ನಿಮ್ಮೆಲ್ಲರನ್ನೂ ಮುಟ್ಟಿ ಇಲ್ಲವೇ ಉಗುಳಿ ಸೋಂಕು ಹರಡುವುದಾಗಿ ಬೆದರಿಸುತ್ತಿದ್ದಾರೆ.

ಇವರೆಲ್ಲರ ಬೆದರಿಕೆ ತಂತ್ರದಿಂದ ವೈದ್ಯರು ಮತ್ತು ನರ್ಸ್​ಗಳು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಸೋಲೇಷನ್​ ವಾರ್ಡ್​ನಲ್ಲಿ ಪೊಲೀಸ್​ ಭದ್ರತೆ ಏರ್ಪಡಿಸಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net