ತಬ್ಲಿಘಿ​ ಜಮಾತ್​ ದೇಶದ ಕರೊನಾ ವೈರಸ್​ ಹಾಟ್​ಸ್ಪಾಟ್: 1,023 ಸೋಂಕಿತರಿಗೆ ತಬ್ಲಿಘಿ ನಂಟು

Tablighi
Published on

ನವದೆಹಲಿ: ನಿಜಾಮುದ್ದೀನ್​ನ ಮರ್ಕಜ್​ನಲ್ಲಿರುವ ತಬ್ಲಿಘಿ​ ಜಮಾತನಲ್ಲಿ ಪಾಲ್ಗೊಂಡಿದ್ದ 1,023 ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಆ ಮೂಲಕ ತಬ್ಲಿಘಿ​ ಜಮಾತ್​ ದೇಶದಲ್ಲಿ ಕರೊನಾ ವೈರಸ್​ನ ಹಾಟ್​ಸ್ಪಾಟ್​ ಎಂಬುದು ಸಾಬೀತಾದಂತಾಗಿದೆ.

ದೇಶದಲ್ಲಿ ಕೋವಿಡ್​-19ಕ್ಕೆ ತುತ್ತಾದವರ ಸಂಖ್ಯೆ ಶನಿವಾರ ಸಂಜೆ ವೇಳೆಗೆ 2,902ಕ್ಕೆ ತಲುಪಿದೆ. ಈ ಪೈಕಿ ತಬ್ಲಿಘಿಯಲ್ಲಿ ಪಾಲ್ಗೊಂಡಿದ್ದ 1,023 ಜನರು ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದರರ್ಥ ಶೇ.30 ಪ್ರಕರಣಗಳು ತಬ್ಲಿಘಿಗೆ ಸಂಬಂಧಿಸಿದ್ದಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್​ ಅಗರ್ವಾಲ್​ ತಿಳಿಸಿದ್ದಾರೆ.

ತಬ್ಲಿಘಿ​ ಜಮಾತ್​ನಲ್ಲಿ ಸಾವಿರಾರು ವಿದೇಶೀಯರು ಭಾಗಿಯಾಗಿದ್ದರು. ಅದರಲ್ಲೂ ಇಲ್ಲಿದ್ದವರನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್​ಗೆ ಕಳುಹಿಸಿದಾಗ 900ಕ್ಕೂ ಅಧಿಕ ವಿದೇಶಿಯರು ಜಮಾತ್​ನಲ್ಲಿದ್ದದು ಕಂಡು ಬಂದಿದೆ.

17 ರಾಜ್ಯಗಳಿಗೆ ಸೋಂಕು: ದೆಹಲಿಯ ತಬ್ಲಿಘಿ​ ಜಮಾತ್​ನಲ್ಲಿ ಬಹುತೇಕ ಎಲ್ಲ ರಾಜ್ಯಗಳ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಮಾತ್​ನಲ್ಲಿ ಪಾಲ್ಗೊಂಡು ಅವರವರ ರಾಜ್ಯಗಳಿಗೆ ಹಿಂದಿರುಗಿದವರ ಪೈಕಿ 17 ರಾಜ್ಯಗಳ ಜನರಲ್ಲಿ ಸೋಂಕು ವ್ಯಾಪಿಸಿದೆ. ಕೆಲ ರಾಜ್ಯಗಳಲ್ಲಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net