More

    ದೆಹಲಿಯ ಮಸೀದಿಗಳಲ್ಲಿ ಅಡಗಿದ್ದಾರೆ 800ಕ್ಕೂ ಹೆಚ್ಚು ಜಮಾತ್​ನ ವಿದೇಶಿ ಕೆಲಸಗಾರರು!: ಮೊಳಗಿದೆ ಮತ್ತೊಂದು COVID19 ಅಲರ್ಟ್​

    ನವದೆಹಲಿ: ತಬ್ಲಿಘಿ ಜಮಾತ್​ನಲ್ಲಿದ್ದ ವಿದೇಶೀಯರು ಇನ್ನೂ ದೆಹಲಿ ಬಿಟ್ಟು ಹೋಗಿಲ್ಲ. ಎಲ್ಲರೂ ಅಲ್ಲಿಯೇ ಇರುವ ಒಂದಿಲ್ಲೊಂದು ಮಸೀದಿಯಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಆತಂಕಕಾರಿ ವರದಿ ಪ್ರಕಟವಾಗಿದೆ. ಈ ವಾರದ ಆರಂಭದಲ್ಲಿ ನಿಜಾಮುದ್ದೀನ್ ಪ್ರದೇಶದಲ್ಲಿನ ತಬ್ಲಿಘಿ ಜಮಾತ್​ನ ಕೇಂದ್ರ ಕಚೇರಿಯಿಂದ 2,300 ಜನರನ್ನು ತೆರವುಗೊಳಿಸಲಾಗಿತ್ತು. ಇದಾಗಿ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು, ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ದೆಹಲಿ ಪೊಲೀಸರು ಆರಂಭಿಸಿದ್ದರು. ಇದರಂತೆ ತನಿಖೆ ವೇಳೆ ಬಹಿರಂಗವಾದ ಮಾಹಿತಿ ಬೆಚ್ಚಿ ಬೀಳಿಸುವಂಥದ್ದಾಗಿವೆ.

    ದೆಹಲಿ ಸರ್ಕಾರಕ್ಕೆ ಪೊಲೀಸರು ಮಾರ್ಚ್​ 31ಕ್ಕೆ ಕಳುಹಿಸಿರುವ ಟಿಪ್ಪಣಿ ಪ್ರಕಾರ, ನಗರದ 16 ಬೇರೆ ಬೇರೆ ಮಸೀದಿಗಳಲ್ಲಿ 800ಕ್ಕೂ ಹೆಚ್ಚು ವಿದೇಶಿ ಧರ್ಮ ಬೋಧಕರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಹೊರತರಲು ಅಗತ್ಯ ನೆರವು ಬೇಕು ಎಂಬ ಸಾರದ ಸಂದೇಶವಿತ್ತು.

    ಆರಂಭದಲ್ಲಿ ತನಿಖಾಧಿಕಾರಿಗಳು 187 ವಿದೇಶೀಯರು ಮತ್ತು ಎರಡು ಡಜನ್​ ಭಾರತೀಯರ ಪಟ್ಟಿಯನ್ನು ಮಾಡಿ ಅವರ ಪತ್ತೆಗೆ ಶೋಧ ಕಾರ್ಯವನ್ನು ಆರಂಭಿಸಿದ್ದರು. ಈ ಕಾರ್ಯಾಚರಣೆ ಆರಂಭವಾದ ಬೆನ್ನಿಗೆ ತಮ್ಮ ಲೆಕ್ಕಾಚಾರ ತಪ್ಪು ಎಂಬುದು ಅಧಿಕಅರಿಗಳಿಗೆ ಮನವರಿಕೆಯಾಗಿದೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಅವರು ಪತ್ತೆ ಹಚ್ಚಿದ ವಿದೇಶೀಯರ ಸಂಖ್ಯೆ 800ಕ್ಕೂ ಹೆಚ್ಚು. ಅವರೆಲ್ಲರೂ ಈ ಜಮಾತ್​ಗೆ ಆಗಮಿಸಿ ಭಾಗವಹಿಸಿದವರಾಗಿದ್ದಾರೆ.

    ಅವರು ಈ ರೀತಿ ಮಾಡಿರುವುದರಿಂದಾಗಿ ಈಗಾಗಲೇ ಅನೇಕರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ರೀತಿ ಮಸೀದಿಯೊಳಗೆ ಆಶ್ರಯ ಪಡೆದಿರುವವರನ್ನು ಹೊರತಂದು ಪರೀಕ್ಷಿಸಿ ಕ್ವಾರಂಟೈನ್​ಗೆ ಒಳಪಡಿಸುವ ಕೆಲಸ ಇನ್ನೊಂದೆರಡು ದಿನಗಳಲ್ಲಿ ಅರಂಭವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

    ಈ 800ಕ್ಕೂ ಹೆಚ್ಚು ವಿದೇಶೀಯರ ಪೈಕಿ 100 ರಷ್ಟು ಜನ ಈಶಾನ್ಯ ಜಿಲ್ಲೆಯ ಮಸೀದಿಗಳಲ್ಲಿ ಪತ್ತೆಯಾದರೆ, 170 ಜನರ ದಕ್ಷಿಣದಲ್ಲೂ, 7 ಜನ ಪಶ್ಚಿಮದಲ್ಲೂ ಕಾಣಿಸಿಕೊಂಡಿದ್ದಾರೆ. ಮರ್ಕಜ್ ನೀಡಿರುವ ಮಾಹಿತಿ ಪ್ರಕಾರ 2,100 ವಿದೇಶೀಯರಿದ್ದರು. ಈ ಪೈಕಿ ಇನ್ನೂ 900 ಜನ ದೆಹಲಿಯಲ್ಲೇ ಬೇರೆ ಬೇರೆ ಕಡೆ ಇರಬಹುದು ಎಂಬ ಗುಮಾನಿ ನಮಗೆ ಇದೆ. ಸದ್ಯ ದೆಹಲಿ ಸರ್ಕಾರ 386 ಪಾಸಿಟಿವ್ ಕೇಸ್​ಗಳನ್ನು ಪತ್ತೆ ಹಚ್ಚಿದ್ದು, ಈ ಪೈಕಿ 259 ಕೇಸ್​ಗಳು ಮರ್ಕಜ್​ ಮಸೀದಿಗೆ ಸಂಬಂಧಿಸಿದ್ದಾಗಿದೆ. ಆರು ಸಾವು ಕೂಡ ಇದಕ್ಕೆ ಸಂಬಂಧಿಸಿದ್ದೇ ಆಗಿದೆ ಎಂಬುದು ಕಳವಳಕಾರಿ ವಿಚಾರ ಎಂದು ಅಧಿಕಾರಿಗಳು ಹೇಳಿದ್ದಾರೆ.  (ಏಜೆನ್ಸೀಸ್​)

    ಕರೊನಾ ವೈರಸ್‌ ಸಮಯದಲ್ಲಿ ಒತ್ತಡ ನಿರ್ವಹಣೆ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts