More

    ಕರೊನಾ ಸೋಂಕಿನಿಂದಾಗಿ ಹೋಮ್ ಐಸೋಲೇಷನ್‌ನಲ್ಲಿ ಇದ್ದೀರಾ? ಹಾಗಿದ್ದರೆ ಹೊಸ ರೂಲ್ಸ್‌ ನೋಡಿ…

    ಬೆಂಗಳೂರು: ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದಾಗಲೇ ಕೆಲವೊಂದು ಹೊಸ ರೂಲ್ಸ್‌ಗಳನ್ನು ಸರ್ಕಾರ ಮಾಡಿದೆ. ಇದರ ಬೆನ್ನಲ್ಲೇ ಸೋಂಕು ಪೀಡಿತರು, ಸೌಮ್ಯ ಲಕ್ಷಣ ಇರುವವರು ಮತ್ತು ಲಕ್ಷಣಗಳೇ ಇಲ್ಲದವರು ಮನೆಯಲ್ಲೇ ಐಸೋಲೇಟ್​ ಆಗಲು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು, ಈ ಸಂಬಂಧ ಹೊಸದಾಗಿರುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
    ಕರೊನಾದ ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವ, ಲಕ್ಷಣರಹಿತ ಸೋಂಕಿತರಿಗೆ ಮಾತ್ರ ಈ ಹೊಸ ನಿಯಮ ಅನ್ವಯ ಆಗುತ್ತಿದೆ. ಸಣ್ಣಪ್ರಮಾಣದಲ್ಲಿ ಉಸಿರಾಟ ತೊಂದರೆ, ಆಕ್ಸಿಜನ್​ ಮಟ್ಟ ಶೇ. 93ಕ್ಕಿಂತ ಕಡಿಮೆ ಇದ್ದವರು ಮನೆಯಲ್ಲಿ ಐಸೋಲೇಟ್​ ಆಗಬಾರದು. ಇಂಥವರು ಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

    ಮನೆಯಲ್ಲಿ ಇರುವವರು ಸೋಂಕಿತರಿಗೆ ಈ ನಿಯಮಗಳು:
    * ಕರೊನಾ ಸೋಂಕಿತರು ಉಳಿದ ಸದಸ್ಯರ ಸಂಪರ್ಕಕ್ಕೆ ಬರಬಾರದು. ಮನೆಯಲ್ಲಿ ವೃದ್ಧರು, ಅಸ್ವಸ್ಥರು ಇದ್ದರಂತೂ ತುಂಬಾ ಜಾಗರೂಕರಾಗಿರಬೇಕು.

    * ಸೋಂಕಿತರು ಇರುವ ಕೋಣೆ ಸದಾ ಗಾಳಿಯಾಡುವಂತೆ ಇರಬೇಕು. ಕಿಟಕಿಗಳನ್ನು ತೆರೆದಿಡಬೇಕು.

    * ಸೋಂಕಿತರು ಮೂರು ಲೇಯರ್​ಗಳ ಮಾಸ್ಕ್​ ಧರಿಸಬೇಕು. ಎಂಟು ಗಂಟೆಗೊಮ್ಮೆ ಅದನ್ನು ಬದಲಿಸಬೇಕು. ಅದನ್ನು ಎಲ್ಲೆಂದರೆಲ್ಲಿ ಎಸೆಯುವಂತಿಲ್ಲ. ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ, ಅದನ್ನು 72 ತಾಸುಗಳ ಕಾಲ ಕಾಗದದ ಬ್ಯಾಗ್​ನಲ್ಲಿ ಇಟ್ಟು ನಂತರ ಡಿಸ್‌ಪೋಸ್‌ ಮಾಡಬೇಕು.

    * ಕರೊನಾ ಸೋಂಕಿರುವ ಸಂದರ್ಭದಲ್ಲಿ ದ್ರವ ರೂಪದ ಆಹಾರಗಳನ್ನು ತೆಗೆದುಕೊಳ್ಳಬೇಕು. ನೀರನ್ನು ಚೆನ್ನಾಗಿ ಕುಡಿಯಬೇಕು. ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮ ಮಾಡಬೇಕು. ವಿಶ್ರಾಂತಿ ತೆಗೆದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು.

    * ಸೋಂಕಿತರು ತಾವು ಬಳಸಿದ ಪಾತ್ರೆಗಳು ಸೇರಿ ಇನ್ನಿತರ ಯಾವುದೇ ವೈಯಕ್ತಿಕ ವಸ್ತುಗಳನ್ನೂ ಮನೆಯಲ್ಲಿ ಇತರರೊಟ್ಟಿಗೆ ಹಂಚಿಕೊಳ್ಳಬಾರದು. ಮನೆಯ ಉಳಿದ ಜನರೂ ಕೂಡ ಈ ಬಗ್ಗೆ ಗಮನಹರಿಸಬೇಕು.

    * ಪಲ್ಸ್ ಆಕ್ಸಿಮೀಟರ್​ಗಳನ್ನು ಖರೀದಿ ಇಟ್ಟುಕೊಂಡಿರಬೇಕು. ಆಕ್ಸಿಜನ್​ ಮಟ್ಟವನ್ನು ಆಗಾಗ್ಗೆ ಚೆಕ್​ ಮಾಡಿಕೊಳ್ಳಬೇಕು. ದೇಹದ ಉಷ್ಣತೆಯ ಬಗ್ಗೆಯೂ ಗಮನ ಇರಬೇಕು. ಯಾವುದೇ ಸಣ್ಣ ಲಕ್ಷಣಗಳು ಕಂಡುಬಂದರೂ ನಿಮಗೆ ಕೊಡಲಾದ ಕಂಟ್ರೋಲ್​ ರೂಂ ನಂಬರ್​ಗೆ ಕರೆ ಮಾಡಬೇಕು.

    ಸೌಮ್ಯ ಲಕ್ಷಣ ಅಥವಾ ಲಕ್ಷಣ ರಹಿತವಾಗಿ ಇದ್ದವರು ಏನು ಮಾಡಬೇಕು?
    * ಮನೆಯಲ್ಲೇ ಐಸೋಲೇಟ್​ ಆಗಿರುವ ಸೌಮ್ಯ ಅಥವಾ ಲಕ್ಷಣ ರಹಿತ ಸೋಂಕಿತರು ಸೋಂಕು ನಿರ್ವಹಣೆಗೆ ಮಾರ್ಗದರ್ಶನ ನೀಡಲು, ಜಿಲ್ಲೆ/ಉಪಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್​ ರೂಂಗಳನ್ನು ಸ್ಥಾಪಿಸಿ, ಅದರ ನಂಬರ್​ನ್ನು ನೀಡಲಾಗುತ್ತದೆ.

    * ಮನೆಯಲ್ಲಿ ಇರುವ ಸೋಂಕಿತರ ಮೇಲೆ ನಿಗಾ ಇಡಬೇಕು. ಕೇರ್​ಟೇಕರ್​​ಗಳು ಎರಡೂ ಡೋಸ್ ಕೊವಿಡ್ 19 ಲಸಿಕೆ ತೆಗೆದುಕೊಂಡವರು ಆಗಿರಬೇಕು.

    * 60 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರು ಕರೊನಾ ಸೋಂಕಿಗೆ ಒಳಗಾಗಿ ಅವರಿಗೆ ಸೌಮ್ಯ ಲಕ್ಷಣಗಳಿದ್ದರೆ ಅಥವಾ ಲಕ್ಷಣರಹಿತರಾಗಿದ್ದರೆ, ಅವರು ಒಮ್ಮೆಲೇ ಹೋಂ ಐಸೋಲೇಶನ್​ಗೆ ಒಳಗಾಗುವಂತಿಲ್ಲ. ಒಮ್ಮೆ ಸಂಬಂಧಪಟ್ಟ ವೈದ್ಯರ ಬಳಿ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು. ನಂತರ ಅವರ ಸಲಹೆ ಮೇರೆಗೆ ಮನೆಯಲ್ಲಿ ಐಸೋಲೇಟ್ ಆಗಬೇಕು.

    ಆಸ್ಪತ್ರೆಗೆ ಯಾವಾಗ ದಾಖಲಾಗಬೇಕು?
    * ಪದೇ ಪದೇ ಜ್ವರ ಶುರುವಾದಾಗ (100 ಡಿಗ್ರಿ ಸೆಲ್ಸಿಯಸ್​​ನಷ್ಟು ಜ್ವರ 3 ದಿನಗಳಾದರೂ ಕಡಿಮೆಯಾಗಿಲ್ಲದಾಗ)

    * ಉಸಿರಾಡಲು ತೊಂದರೆಯಾದಾಗ

    * ಆಕ್ಸಿಜನ್​ ಮಟ್ಟ ಕಡಿಮೆಯಾದಾಗ

    * ಎದೆ ಭಾಗದಲ್ಲಿ ನೋವು ಶುರುವಾದರೆ

    * ಅತಿಯಾದ ಆಯಾಸ ಉಂಟಾದರೆ

    * ಮಾನಸಿಕವಾಗಿ ಏನಾದರೂ ಕಿರಿಕಿರಿ, ಗೊಂದಲಗಳು ಹೆಚ್ಚಾದರೆ.

    ಪತಿ, ಪತ್ನಿ ಮತ್ತು ಶುಭ ಮುಹೂರ್ತ: 11 ವರ್ಷವಾದ್ರೂ ಮಂಚಕ್ಕೆ ಬರದ ಹೆಂಡ್ತಿ! ಕಂಗೆಟ್ಟ ಗಂಡನಿಗೆ ಕೋರ್ಟ್‌ ನೀಡ್ತು ಡಿವೋರ್ಸ್‌

    ವೀಕೆಂಡ್‌ ಕರ್ಫ್ಯೂ ವೇಳೆ ಬಸ್‌, ಮೆಟ್ರೊ ಸೇವೆ ಇರುತ್ತಾ? ಏನೇನು ಹೊಸ ರೂಲ್ಸ್‌? ಇಲ್ಲಿವೆ ಡಿಟೇಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts