More

    ಎಟಿಎಂ ವಿತ್‌ಡ್ರಾ, ಫುಡ್‌ ಆರ್ಡರ್‌, ಓಲಾ ಜೇಬಿಗೆ ಭಾರ: ಬ್ಯಾಂಕ್‌ ಲಾಕರ್‌ ಗ್ರಾಹಕ ನಿರಾಳ- ಆರು ಹೊಸ ರೂಲ್ಸ್‌ ಇಲ್ಲಿವೆ

    ನವದೆಹಲಿ: ಹೊಸ ವರ್ಷದ ಬೆನ್ನಲ್ಲೇ ಹೊಸಹೊಸ ರೂಲ್ಸ್‌ಗಳು ಕಾಲಿಟ್ಟಿವೆ. ಜ.1ರಿಂದಲೇ ಅನ್ವಯ ಆಗುವಂತೆ ಜೇಬಿಗೆ ತುಸು ದುಬಾರಿ ಎನಿಸುವ ಹಾಗೂ ಜನರು ನಿರಾಳವಾಗುವ ಆರು ಹೊಸ ಯೋಜನೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಎಟಿಎಂ ವಿತ್‌ಡ್ರಾ:
    ಎಟಿಎಂಗಳಲ್ಲಿ ಪ್ರತಿತಿಂಗಳು ಉಚಿತ ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ಅದೇನೆಂದರೆ ನೀವು ಯಾವ ಬ್ಯಾಂಕ್‌ನ ಎಟಿಎಂ ಹೊಂದಿರುತ್ತೀರೋ ಅದೇ ಬ್ಯಾಂಕ್‌ನ ಎಟಿಎಂನಲ್ಲಿ ತಿಂಗಳಿಗೆ ಐದು ಸಲ ಮಾತ್ರ ಹಣವನ್ನು ವಿತ್‌ಡ್ರಾ ಮಾಡಬಹುದು. ಆರನೇ ಬಾರಿ ಹಣ ವಿತ್‌ಡ್ರಾ ಮಾಡುವುದಿದ್ದರೆ ಪ್ರತಿಯೊಂದು ಬಾರಿಯೂ 21 ರೂಪಾಯಿ ಎಕ್ಸ್‌ಟ್ರಾ ಖರ್ಚಾಗುತ್ತದೆ.

    ಒಂದು ವೇಳೆ ನಿಮ್ಮ ಬ್ಯಾಂಕ್‌ ಬಿಟ್ಟು ಬೇರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡಿದ್ದೇ ಆದರಲ್ಲಿ ನಗರ ಪ್ರದೇಶಗಳಲ್ಲಿ ಮೂರು ಬಾರಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಐದು ಬಾರಿ ಮಾತ್ರ ಉಚಿತ ವಹಿವಾಟಿಗೆ ಅವಕಾಶವಿದೆ. ಇದನ್ನು ಮೀರಿದರೆ ಪ್ರತಿ ಟ್ರಾನ್‌ಸಾಕ್ಷನ್‌ ಮೇಲೆ 21 ರೂಪಾಯಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.

    ಆನ್‌ಲೈನ್ ಫುಡ್‌ ಆರ್ಡರ್‌
    ಈಗಂತೂ ಆನ್‌ಲೈನ್‌ಗಳಲ್ಲಿ ಆರ್ಡರ್‌ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜ.1ರಿಂದಲೇ ಅನ್ವಯ ಆಗುವಂತೆ ಸ್ವಿಗ್ಗಿ. ಜೊಮ್ಯಾಟೋ ಸೇರಿದಂತೆ ಫುಡ್ ಡೆಲಿವರಿ ಆ್ಯಪ್‌ಗಳು ಶೇ.5ರಷ್ಟು ಜಿಎಸ್‌ಟಿ ಸಂಗ್ರಹಿಸಲು ಮುಂದಾಗಿದೆ. ಇಲ್ಲಿಯವರೆಗಿನ ಸ್ಥಿತಿ ಹೇಗಿತ್ತು ಎಂದರೆ ನೀವು ಯಾವ ರೆಸ್ಟೋರೆಂಟ್‌, ಹೋಟೆಲ್‌ನಿಂದ ಆಹಾರವನ್ನು ಪಡೆಯಲು ಇಚ್ಛಿಸುತ್ತಿದ್ದೀರೋ ಅವುಗಳೇ ಜಿಎಎಸ್‌ಟಿ ನೀಡುತ್ತಿದ್ದವು, ಆದರೆ ಇನ್ಮುಂದೆ ಗ್ರಾಹಕರು ಅದನ್ನು ನೀಡಬೇಕು. ಈ ಹೆಚ್ಚುವರಿ ಹಣದ ಹೊರತಾಗಿ ಡೆಲಿವರಿ ಜಾರ್ಜ್, ಪ್ಯಾಕಿಂಗ್ ಶುಲ್ಕ, ಡೆಲಿವರಿ ಬಾಯ್ಸ್ ಟಿಪ್ಸ್ ಇತ್ಯಾದಿ ಹೆಚ್ಚುವರಿಯಾಗಿ ಕೊಡಬೇಕಾಗುವ ಸಾಧ್ಯತೆ ಇದ್ದು, ಇನ್ನೂ ಹೆಚ್ಚಿನ ಹೊರೆ ಗ್ರಾಹಕರ ಮೇಲೆ ಬೀಳಲಿದೆ.

    ಓಲಾ, ಉಬರ್
    ಓಲಾ, ಉಬರ್ ಸೇರಿದಂತೆ ಇಂಥ ಪ್ರಯಾಣದ ಟ್ಯಾಕ್ಸಿಗಳ ಬುಕಿಂಗ್ ಕೂಡ ಇಂದಿನಿಂದ ದುಬಾರಿಯಾಗಿದೆ. ಓಲಾ ಹಾಗೂ ಉಬರ್ ಸೇವೆಗಳ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗಿದೆ.

    ಅಂಚೆ ಬ್ಯಾಂಕ್
    ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಗದು ವಿತ್ ಡ್ರಾ ಹಾಗೂ ಠೇವಣಿ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಿದೆ. ಉಳಿತಾಯ ಖಾತೆಯಿಂದ ನಿಗದಿತ ಮಿತಿಗಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡೋ ಶುಲ್ಕದಲ್ಲಿ ಹೆಚ್ಚಳ ಮಾಡಿದೆ.

    ಬ್ಯಾಂಕ್ ಲಾಕರ್
    ಬ್ಯಾಂಕ್‌ ಲಾಕರ್‌ ವಿಷಯದಲ್ಲಿ ಗ್ರಾಹಕರು ಸ್ವಲ್ಪ ನಿರಾಳರಾಗಬಹುದಾಗಿದೆ. ಏಕೆಂದರೆ ಬ್ಯಾಂಕಿನ ಲಾಕರ್‌ನಲ್ಲಿ ಇಟ್ಟಿರುವ ವಸ್ತುಗಳು ಕಳೆದುಹೋದರೆ ಬ್ಯಾಂಕ್ ಆತನಿಗೆ ಗ್ರಾಹಕರಿಗೆ ನೀಡಬೇಕು. ಈ ಪರಿಹಾರದ ಮೊತ್ತ ಗ್ರಾಹಕ ಲಾಕರ್ ನಿರ್ವಹಣೆಗಾಗಿ ಬ್ಯಾಂಕಿಗೆ ಪಾವತಿಸೋ ವಾರ್ಷಿಕ ಬಾಡಿಗೆಯ ನೂರು ಪಟ್ಟು ಇರಬೇಕು ಎಂಬ ಹೊಸ ರೂಲ್ಸ್‌ ಮಾಡಲಾಗಿದೆ.

    ಇನ್ನು ಬ್ಯಾಂಕ್ ತನ್ನ ಸ್ಟ್ರಾಂಗ್ ರೂಮಿನಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಲಾಕರ್ ಸುತ್ತಲೂ ನಡೆಯುವ ಚಟುವಟಿಕೆಗಳ ಸಿಸಿಟಿವಿ ಫುಟೇಜ್ ಅನ್ನು 180 ದಿನಗಳ ಕಾಲ ಸಂರಕ್ಷಿಸಿಡಬೇಕು. ಬ್ಯಾಂಕುಗಳು ತಮ್ಮ ಶಾಖೆಗಳಲ್ಲಿ ಎಷ್ಟು ಲಾಕರ್ ಗಳು ಖಾಲಿಯಿವೆ ಅದಕ್ಕಾಗಿ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಕಾಲಕಾಲಕ್ಕೆ ಪ್ರಕಟಿಸುವಂತೆ ಹೊಸ ನಿಯಮದಲ್ಲಿ ಸೂಚಿಸಲಾಗಿದೆ.

    ಹೆಣ್ಣನ್ನು ಕಂಡ್ರೆ ಆಗದ ಕುಟುಂಬದಲ್ಲಿ ಬೆಳೆದ ನಾನು ಅನ್ಯಧರ್ಮಿಯನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ… ಪ್ಲೀಸ್‌ ದಾರಿ ತೋರಿ ಮೇಡಂ

    ನನಗಾಗಿ ಮಮ್ಮಿ-ಡ್ಯಾಡಿ ಎಷ್ಟೆಲ್ಲಾ ಖರ್ಚು ಮಾಡಿದ್ರು, ಅವ್ರಿಗೆ ಹೇಗೆ ಮುಖತೋರಿಸಲಿ ಎಂದು ಆತ್ಮಹತ್ಯೆಗೆ ಶರಣಾದ ಭಾವಿ ವೈದ್ಯೆ!

    ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್‌ ಮಗು: ಓ ಮೈ ಗಾಡ್‌ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts