More

    ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್‌ ಮಗು: ಓ ಮೈ ಗಾಡ್‌ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?

    ಔರಂಗಾಬಾದ್​ (ಬಿಹಾರ): ಕೆಲವೊಮ್ಮೆ ಪ್ರಕೃತಿಯಲ್ಲಿ ವಿಸ್ಮಯಗಳು ನಡೆಯುತ್ತವೆ. ವಿಜ್ಞಾನ ಲೋಕ, ವೈದ್ಯ ಲೋಕವನ್ನೇ ತಲ್ಲಣಗೊಳಿಸುವ, ಎಲ್ಲರೂ ಬೆರಗಾಗುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಕೆಲವೊಮ್ಮೆ ಇಂಥ ಘಟನೆಗಳಿಗೆ ವೈಜ್ಞಾನಿಕವಾಗಿ ಇಂಥ ಕಾರಣ ಇದ್ದಿರಬಹುದು ಎಂದು ತಜ್ಞರು ಹೇಳುವುದೂ ಉಂಟು.

    ಅಂಥದ್ದೇ ವಿಚಿತ್ರ ಘಟನೆ, ವೈದ್ಯರನ್ನೇ ಬೆಚ್ಚಿಬೀಳಿಸಿರುವ ಘಟನೆ ಬಿಹಾರನ ಔರಂಗಾಬಾದ್​​ನಲ್ಲಿ ನಡೆದಿದೆ. ಇಲ್ಲಿಯ ಮಹಿಳೆಯೊಬ್ಬಳಿಗೆ ಪ್ಲಾಸ್ಟಿಕ್‌ ಮಗು ಜನಿಸಿದೆ. ಹೊಟ್ಟೆನೋವೆಂದು ಇಲ್ಲಿಯ ಸದರ್​​ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರೆಲ್ಲರೂ ಒಮ್ಮೇಲೇ ‘ಓ ಮೈ ಗಾಡ್‌’ ಎಂದು ಉದ್ಗರಿಸಿದ್ದಾರೆ. ಪ್ಲಾಸ್ಟಿಕ್ ಮಗುವನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

    ಅಷ್ಟಕ್ಕೂ ಏನಿದು ಪ್ಲಾಸ್ಟಿಕ್‌ ಮಗು? ಇಂಥ ಮಗು ಜನಿಸುವುದು ಏಕೆ ಎಂಬ ಬಗ್ಗೆ ಖುದ್ದು ವೈದ್ಯರು ಈ ರೀತಿ ಮಾಹಿತಿ ನೀಡಿದ್ದಾರೆ:
    ಇದು ಒಂದು ರೀತಿಯ ಕಾಯಿಲೆ. ಇಂಥ ಮಗುವನ್ನು ಕೊಲೋಡಿಯನ್ ಬೇಬಿ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಇದನ್ನು ಪ್ಲಾಸ್ಟಿಕ್‌ ಮಗು ಎನ್ನಲಾಗುತ್ತದೆ. ಏಕೆಂದರೆ, ಇಂಥ ಮಗು ಜನಿಸುವಾಗ ದೇಹದ ಚರ್ಮ ಸಂಪೂರ್ಣವಾಗಿ ಪ್ಲಾಸ್ಟಿಕ್​​ನಂತಿರುತ್ತದೆ. ಮಗುವಿನ ಸಂಪೂರ್ಣ ದೇಹ ಪ್ಲಾಸ್ಟಿಕ್​​​ನಂತಹ ಪದರದಿಂದ ಮುಚ್ಚಿರುತ್ತದೆ.

    11 ಲಕ್ಷ ಮಕ್ಕಳಲ್ಲಿ ಒಂದು ಮಗುವಿಗೆ ಇಂಥ ಸಮಸ್ಯೆ ಕಂಡುಬರುತ್ತದೆ. ಇಂಥ ಮಗು ಹುಟ್ಟಿದಾಗ ಬದುಕುವ ಸಾಧ್ಯತೆ ತುಂಬಾ ಕಡಿಮೆ. ಹುಟ್ಟಿದ ತಕ್ಷಣ ಸಾಮಾನ್ಯ ಮಗುವಿನಂತೆ ಈ ಮಗು ಕೂಡ ಅಳುತ್ತದೆ. ಆದರೆ ಅಳಲು ಪ್ರಾರಂಭಿಸುತ್ತಿದ್ದಂತೆಯೇ ಅದರ ಶರೀರದಲ್ಲಿರುವ ಪ್ಲಾಸ್ಟಿಕ್‌ ಪದರಗಳು ಒಡೆಯಲು ಶುರುವಾಗುತ್ತವೆ ಎಂದಿದ್ದಾರೆ ವೈದ್ಯರು.

    ಇಂಥ ಮಗು ಹುಟ್ಟಲು ಮುಖ್ಯ ಕಾರಣ, ತಂದೆಯ ವೀರ್ಯದಲ್ಲಿನ ಸಮಸ್ಯೆ. ಸಂಭೋಗ ನಡೆಸುವ ಸಂದರ್ಭದಲ್ಲಿ ವೀರ್ಯದಲ್ಲಿ ಸಮಸ್ಯೆಯಾಗಿದ್ದರೆ ಇಂಥ ಮಗು ಹುಟ್ಟುತ್ತದೆ. ಅಥವಾ ಮಗು ತಾಯಿಯ ಗರ್ಭದಲ್ಲಿರುವ ಸಂದರ್ಭದಲ್ಲಿ ಯಾವುದ್ಯಾವುದೋ ಕಾರಣಕ್ಕೆ ಮಗುವಿನ ಬೆಳವಣಿಗೆ ಸಂಪೂರ್ಣವಾಗಿ ಆಗದಿದ್ದರೂ ಇದು ಸಾಧ್ಯವಿದೆ. ಜತೆಗೆ, ಅನುವಂಶಿಕ ಸಮಸ್ಯೆಯಿಂದಾಗಿಯೂ ಈ ರೀತಿಯ ಮಗು ಜನಿಸುವ ಸಾಧ್ಯತೆ ಇದೆ.

    ಮೊದಲನೆಯ ಮಗು ಇಂಥ ಸಮಸ್ಯೆಯಿಂದ ಹುಟ್ಟಿದ್ದರೆ, ಎರಡನೇ ಮಗು ಸಹ ಇದೇ ರೀತಿಯ ಹುಟ್ಟುವ ಸಾಧ್ಯತೆ ಶೇ. 25ರಷ್ಟು ಇರುತ್ತದೆ. ಆದ್ದರಿಂದ ಗರ್ಭಿಣಿ ಎಂದು ತಿಳಿದ ತಕ್ಷಣ ಮೂರನೇ ತಿಂಗಳಿಗೆ ಪರೀಕ್ಷೆ ಮಾಡಿಸಿ, ಇಂತಹ ಮಗು ಹುಟ್ಟುವುದನ್ನು ತಪ್ಪಿಸಬಹುದಾಗಿದೆ.

    ಸದ್ಯ ಈ ಪ್ಲಾಸ್ಟಿಕ್‌ ಮಗುವನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.​ ಸದ್ಯದ ಮಟ್ಟಿಗೆ ಮಗು ಹಾಗೂ ತಾಯಿ ಸುರಕ್ಷಿತವಾಗಿದೆ. ಆದರೆ ಮಗು ಎಷ್ಟು ದಿನ ಬದುಕುತ್ತದೆ ಎಂದು ಹೇಳುವುದು ಕಷ್ಟ ಎಂದಿದ್ದಾರೆ ನವಜಾತ ಶಿಶು ಘಟಕದ ವೈದ್ಯಾಧಿಕಾರಿ ಡಾ. ದಿನೇಶ್​​ ದುಬೆ.

    ಪದವೀಧರರಾ? ರಾಜ್ಯ ನೌಕರರ ವಿಮಾ ನಿಗಮದಲ್ಲಿವೆ 3,865 ಹುದ್ದೆಗಳು- ಕರ್ನಾಟಕದಲ್ಲಿಯೂ ಭರಪೂರ ಅವಕಾಶ

    ಬಹಳ ಒಳ್ಳೆಯವ್ರು ನಮ್‌ ಮಿಸ್ಸು ಎನ್ನುತ್ತಲೇ ಶಿಕ್ಷಕಿ ಜತೆ 10ನೇ ಕ್ಲಾಸ್‌ ಹುಡುಗನ ಲವ್ವಿ-ಡವ್ವಿ! ಓಡಿಹೋಗಿ ಮದ್ವೆಯಾಗಿ ಪೇಚಿಗೆ…

    VIDEO: ಮಹಾಮಸ್ತಕಾಭಿಷೇಕದ ವೇಳೆ ಕಣ್ಣುಬಿಟ್ಟ ಅಯ್ಯಪ್ಪ? ಮಣಿಕಂಠನ ವಿಡಿಯೋ ನೋಡಿ ಪುಳಕಗೊಂಡ ಭಕ್ತಾದಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts