More

    VIDEO: ಮಹಾಮಸ್ತಕಾಭಿಷೇಕದ ವೇಳೆ ಕಣ್ಣುಬಿಟ್ಟ ಅಯ್ಯಪ್ಪ? ಮಣಿಕಂಠನ ವಿಡಿಯೋ ನೋಡಿ ಪುಳಕಗೊಂಡ ಭಕ್ತಾದಿಗಳು

    ಕೊಯಮತ್ತೂರು (ತಮಿಳುನಾಡು): ದೇವರ ವಿಗ್ರಹಗಳು ಕಣ್ಣುಬಿಡುವುದು, ಗಣಪತಿ ಹಾಲು ಕುಡಿಯುವುದು, ಕೆಲವೊಂದು ಗಿಡಗಳಿಂದ ಹಾಲು ಸುರಿಯುವುದು… ಹೀಗೆ ಅನೇಕ ಘಟನೆಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ. ಇವುಗಳ ಸುದ್ದಿಯಾಗುತ್ತಿದ್ದಂತೆಯೇ ಭಕ್ತಾದಿಗಳು ಸ್ಥಳಕ್ಕೆ ದೌಡಾಯಿಸಿ ವಿಶೇಷ ಪೂಜೆ ಮಾಡಿಸುವುದು ಉಂಟು. ಎಷ್ಟೋ ಸಂದರ್ಭದಲ್ಲಿ ಇದು ನಿಜವಾದದ್ದಲ್ಲ, ಬದಲಿಗೆ ಇದರಲ್ಲಿರುವ ವೈಜ್ಞಾನಿಕ ಕಾರಣಗಳೇ ಬೇರೆ ಎಂದು ಸಾಬೀತಾಗಿದ್ದು ಉಂಟು.

    ಅದೇನೇ ಇದ್ದರೂ ಈಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ, ತಮಿಳುನಾಡಿನ ಸೆಲ್ವಪುರಂನ ತಿಲ್ಲೈ ನಗರದ ಮಣಿಕಂಠ ಸ್ವಾಮಿ ದೇವಸ್ಥಾನದಲ್ಲಿರುವ ವಿಗ್ರಹವು ಮಹಾಮಸ್ತಕಾಭಿಷೇಕದ ವೇಳೆ ಕಣ್ತೆರೆದು ಮುಚ್ಚುತ್ತಿರುವ ಘಟನೆ ಇದಾಗಿದೆ.

    ಇದರ ವಿಡಿಯೋ ಭಾರಿ ಸುದ್ದಿಮಾಡುತ್ತಿದೆ. ಈ ವಿಡಿಯೋದಲ್ಲಿ ಸಮೀಪದಿಂದ ನೋಡಿದರೆ ವಿಗ್ರಹವು ನಿಜವಾಗಿಯೂ ಕಣ್ಣನ್ನು ತೆರೆದು ಮುಚ್ಚಿರುವಂತೆ ಕಾಣಿಸುತ್ತಿದೆ. ಮಹಾಮಸ್ತಕಾಭಿಷೇಕದ ವೇಳೆ ಮೂರ್ನಾಲ್ಕು ಬಾರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಕಳೆದ ಶನಿವಾರ (ಡಿ.25)ರಂದು ನಡೆದ ದೇವಸ್ಥಾನದ 40ನೇ ವಾರ್ಷಿಕೋತ್ಸವ ಪೂಜೆಯಲ್ಲಿ 3 ಸಾವಿರಕ್ಕೂ ಅಧಿಕ ಅಯ್ಯಪ್ಪನ ಭಕ್ತರು ದೇವಾಲಯಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅಯ್ಯಪ್ಪನ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ತುಪ್ಪದ ಅಭಿಷೇಕ ಮಾಡಲಾಗುತ್ತಿತ್ತು. ಈ ವೇಳೆ ವಿಗ್ರಹ ಕಣ್ಣು ತೆರೆದು, ಮತ್ತೆ ಮುಚ್ಚಿದೆ ಎಂದು ಹೇಳಲಾಗುತ್ತಿದೆ.

    ಇದು ಸುದ್ದಿಯಾಗುತ್ತಲೇ ಭಕ್ತಾದಿಗಳು ದೇವಾಲಯಕ್ಕೆ ಓಡೋಡಿ ಬಂದು ದರ್ಶನ ಪಡೆಯತೊಡಗಿದರು. ಈ ವಿಡಿಯೋ ನೋಡಿದ ಭಕ್ತರು ವಿಡಿಯೋದಲ್ಲಿಯೇ ಪವಾಡವನ್ನು ಕೊಂಡಾಡಿದರೆ, ಇನ್ನು ಕೆಲವರು ಇದೊಂದು ಭ್ರಮೆಯಷ್ಟೇ. ವಿಡಿಯೋ ಮಾಡುವ ಸಂದರ್ಭದಲ್ಲಿ ವಿಗ್ರಹವು ಒಂದೊಂದು ಆ್ಯಂಗಲ್‌ನಲ್ಲಿ ಒಂದೊಂದು ರೀತಿ ಕಾಣಿಸುತ್ತದೆ ಅಷ್ಟೇ ವಿನಾ ವಿಗ್ರಹ ಕಣ್ಣುಬಿಟ್ಟಿದ್ದಲ್ಲ ಎಂದಿದ್ದಾರೆ.

    ಅವರವರ ಭಾವಕ್ಕೆ…. ಅವರವರ ಭಕುತಿಗೆ…. ಎನ್ನುವಂತೆ ಈ ವಿಡಿಯೋ ಮಾತ್ರ ಭಾರಿ ಶೇರ್‌ ಆಗುತ್ತಲೇ ಇದೆ.

    ವಿಡಿಯೋ ಇಲ್ಲಿದೆ ನೋಡಿ: (ಕೃಪೆ-Behindwoods Air)

    VIDEO: ‘ಆಟೋರಾಜ’ನಾದ ಸಲ್ಮಾನ್‌ ಖಾನ್‌- ರಸ್ತೆಯಲ್ಲಿ ನೂಕುನುಗ್ಗಲು: ವಿಡಿಯೋ ವೈರಲ್‌

    ಇಟಲಿಗೆ ಹಾರಿದ ರಾಹುಲ್‌ ಗಾಂಧಿ: ಪ್ಲೀಸ್‌… ಪ್ಲೀಸ್‌… ಜನರಲ್ಲಿ ಕೈಮುಗಿದು ಹೀಗೆ ಬೇಡಿಕೊಂಡ್ರು ಕಾಂಗ್ರೆಸ್‌ ವಕ್ತಾರ!

    ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts