More

    ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್​ ಲಪಟಾಯಿಸಿದ ಖದೀಮರು; ಲಕ್ಷಾಂತರ ರೂಪಾಯಿ ವಂಚನೆ

    ಉಡುಪಿ: ಎಟಿಎಂನಿಂದ ಹಣ ತೆಗೆಯುವುದಾಗಿ ನಂಬಿಸಿ ಗ್ರಾಹಕರಿಂದ ಕಾರ್ಡ್​ ಪಡೆದು ಲಕ್ಷಾಂತರ ರೂಪಾಯಿ ಹಣ ಲಪಾಟಿಯಿಸಿರುವ ಘಟನೆ ಉಡುಪಿ ಜಿಲ್ಲೆ ಬೈಂದೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಜನವರಿ 09ರಂದು ಈ ರೀತಿಯ ಮೂರು ಘಟನೆಗಳು ನಡೆದಿದ್ದು, ಬಲ್ಕೀಸ್ ಭಾನು (38), ಚೈತ್ರ (29), ಚಂದ್ರಶೇಖರ (62) ಮೋಸ ಹೋದವರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಜನವರಿ 09 ಬೆಳಗ್ಗೆ 10 ಘಂಟೆ ಸುಮಾರಿಗೆ ಶಿರೂರು ಮಾರ್ಕೆಟ್​ ಬಳಿ ಇರುವ ಕೆನೆರಾ ಬ್ಯಾಂಕ್​ ಎಟಿಎಂನಲ್ಲಿ ಚೈತ್ರಾ ಎಂಬುವವರಿಗೆ, 10:15ರ ಸುಮಾರಿಗೆ ಶಿರೂರು ಅರ್ಬನ್​ ಬ್ಯಾಂಕಿನ ಎಟಿಎಂನಲ್ಲಿ ಬಲ್ಕೀಸ್​ ಬಾನು ಹಾಗೂ ಸ್ಟೇಟ್​ ಬ್ಯಾಂಕ್​ ಆಫ ಇಂಡಿಯಾ ಎಟಿಎಂನಲ್ಲಿ ಸಳ್ವಾಡಿ ಗ್ರಾಮದ ಚಂದ್ರಶೇಖರ್​ ಎಂಬುವವರಿಗೆ ಖದೀಮರು ವಂಚಿಸಿದ್ದಾರೆ.

    ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ವಿರಾಟ್​ ಕೊಹ್ಲಿ ಅಲಭ್ಯ​; ಕಾರಣ ಹೀಗಿದೆ

    ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರದೊಳಗೆ ಇರುವ ಇಬ್ಬರು ಅಪರಿಚಿತರು, ಎಟಿಎಂನಲ್ಲಿ ಹಣ ಪಡೆಯಲು ಸಾಧ್ಯವಾಗದ ಚೈತ್ರಾ, ಬಲ್ಕೀಸ್ ಬಾನು ಹಾಗೂ ಚಂದ್ರಶೇಖರ್ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಪಡೆದುಕೊಂಡಿದ್ದರು. ಬಳಿಕ ಹಣ ಬರುತ್ತಿಲ್ಲ ಎಂದು ಹೇಳಿ, ಅವರ ಕಾರ್ಡ್ ಗಳನ್ನು ಬದಲಾಯಿಸಿ ವಾಪಸ್ ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದರು.

    ಬಳಿಕ ಪರಿಶೀಲಿಸಿದಾಗ ಇವರೆಲ್ಲರ ಕಾರ್ಡ್ ಗಳು ಬದಲಾಗಿರುವುದು ಕಂಡು ಬಂದಿದ್ದು, ಬ್ಯಾಂಕಿನಲ್ಲಿ ವಿಚಾರಿಸಿದಾಗ ಚೈತ್ರಾರ ಖಾತೆಯಿಂದ 21 ಸಾವಿರ ರೂ., ಬಲ್ಕೀಸ್ ಬಾನು ಖಾತೆಯಿಂದ 5 ಸಾವಿರ ರೂ,, ಮತ್ತು ಚಂದ್ರಶೇಖರ್ ಖಾತೆಯಿಂದ 2 ಲಕ್ಷ ರೂ. ಡ್ರಾ ಮಾಡಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

    ಆರೋಪಿಗಳು ಉರದುವಿನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಗ್ರಾಹಕರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts