

ಕಳೆದ ಆರೇಳು ತಿಂಗಳುಗಳಿಂದ ಲಾಕ್ಡೌನ್ನಿಂದಾಗಿ ಅತ್ತ ಶೂಟಿಂಗ್ನಲ್ಲಿ ಭಾಗವಹಿಸಲಾಗದೆ, ಇತ್ತ ಮನೆಯಲ್ಲಿ ಇರಲಾರದೆ ಕಂಗೆಟ್ಟಿದ್ದ ಸೆಲೆಬ್ರಿಟಿಗಳೆಲ್ಲಾ ಈಗ ಒಬ್ಬೊಬ್ಬರೇ ಮನೆ ಆಚೆ ಬರುತ್ತಿದ್ದಾರೆ. ಕೆಲವರು ಸೀದಾ ಶೂಟಿಂಗ್ ಸ್ಪಾಟ್ಗೆ ಹೋದರೆ, ಇನ್ನೂ ಕೆಲವರು ಹಾಲಿಡೇ ಅಂತ ಬೇರೆ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ.
ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ ಇದೀಗ ಹಾಲಿಡೇ ಮೂಡ್ನಲ್ಲಿದ್ದಾರೆ. ಅವರು ತಮ್ಮ ಸಹೋದರಿಯರ ಜತೆಗೆ ಮಾಲ್ಡೀವ್ಸ್ಗೆ ಹೋಗಿದ್ದು, ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಹೌದು, ಲಾಕ್ಡೌನ್ ತೆರವಾದ ನಂತರ ವಿಜಯ್ ಸೇತುಪತಿ ಅಭಿನಯದ ಹೊಸ ಚಿತ್ರವೊಂದರ ಚಿತ್ರೀಕರಣವನ್ನು ಮುಗಿಸಿರುವ ತಾಪ್ಸಿ, ಸೀದಾ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಸಹೋದರಿ ಶಗುನ್ ಪನ್ನು ಮತ್ತು ಇವಾನಿಯಾ ಪನ್ನು ಜತೆಗೆ ಮಾಲ್ಡೀವ್ಸ್ನಲ್ಲಿ ಬೀಡುಬಿಟ್ಟಿರುವ ಅವರು, ಅಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಇಂದು ಬೆಳಿಗ್ಗೆ ತಾಪ್ಸಿ ತಮ್ಮ ಬ್ರೇಕ್ಫಾಸ್ಟ್ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೂಲ್ವೊಳಗೆ ಕುಳಿತು ತಿಂಡಿ ಮತ್ತು ಎದುರಿಗಿರುವ ಸೌಂದರ್ಯವನ್ನು ತಾಪ್ಸಿ ಸವಿಯುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ. ಮೊಟ್ಟೆ, ಅವಕಡೋಸ್, ಮಶ್ರೂಮ್ಸ್ಗಳನ್ನು ತಿನ್ನುತ್ತಾ, ಸಮುದ್ರದ ಸೌಂದರ್ಯವನ್ನು ತಾಪ್ಸಿ ಸವಿಯುತ್ತಿರುವ ಈ ಫೋಟೋ, ಇದೀಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಈ ವಾರಾಂತ್ಯವನ್ನು ತಾಪ್ಸಿ ಮಾಲ್ಡೀವ್ಸ್ನಲ್ಲೇ ಕಳೆಯುತ್ತಿದ್ದು, ಮುಂದಿನ ವಾರ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.