T20WorldCup: ಬಾಂಗ್ಲಾ ವಿರುದ್ಧ ಭಾರತಕ್ಕೆ ಗೆಲುವು, ಸೆಮಿಫೈನಲ್​ಗೆ ಲಗ್ಗೆ ಇಟ್ಟ ರೋಹಿತ್​ ಪಡೆ

t20worldcu india
Published on

ಅಡಿಲೇಡ್​: ಐಸಿಸಿ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಬಾಂಗ್ಲಾವನ್ನು ಮಣಿಸಿ ಭಾರತ ತಂಡ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಬುಧವಾರ ನಡೆದ 4ನೇ ಲೀಗ್​ನಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡ, 5 ರನ್​ಗಳ ಅಂತರದಲ್ಲಿ ಸೋಲುಂಡಿದೆ.

ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ 6 ವಿಕೆಟ್​ ಕಳೆದುಕೊಂಡ 184 ರನ್​ ಪಡೆದು ಎದುರಾಳಿ ತಂಡಕ್ಕೆ 185 ರನ್​ಗಳ ಗುರಿ ನೀಡಿತ್ತು. 186 ರನ್​ಗಳ ಬೆನ್ನಟ್ಟಿದ ಬಾಂಗ್ಲಾಪಡೆಗೆ ಮಳೆಯಿಂದಾಗಿ 2ನೇ ಇನ್ನಿಂಗ್ಸ್​ನಲ್ಲಿ 16 ಓವರ್​ಗೆ ಇಳಿಸಿ 151 ರನ್​ಗಳ ಗುರಿ ನೀಡಲಾಗಿತ್ತು. ಆದರೆ, 145 ರನ್​ ಪೇರಿಸಲಷ್ಟೇ ಸಾಧ್ಯವಾಯಿತು. ವಿರಾಟ್​ ಕೊಹ್ಲಿ ಮತ್ತು ಕೆ.ಎಲ್​.ರಾಹುಲ್​ ಸಿಡಿಸಿದ ಅರ್ಧಶತಕ ಭಾರತ ತಂಡದ ರನ್​ಗಳ ಮೊತ್ತ ಹೆಚ್ಚಿಸಿದ್ದರು.

ಟಿ20 ವಿಶ್ವಕಪ್​ನ ಟೂರ್ನಿಯ ಮೊದಲ ಮೂರು ಪಂದ್ಯದಲ್ಲಿ ಕೇವಲ 22 ರನ್​ ಗಳಿಸಿ ವೈಫಲ್ಯ ಕಂಡಿದ್ದ ಉಪನಾಯಕ ಕೆ.ಎಲ್​ ರಾಹುಲ್​, ಇಂದಿನ ಪಂದ್ಯದಲ್ಲಿ 32 ಬಾಲ್​ಗೆ 50 ರನ್​ ಪಡೆದು ಟೀಕೆ ಮಾಡುವವರಿಗೆ ಬ್ಯಾಟಿಂಗ್​ನಲ್ಲೇ ಉತ್ತರ ನೀಡಿದ್ದಾರೆ. ಕೊನೇವರೆಗೂ ಆಟವಾಡಿದ ವಿರಾಟ್​ ಕೊಹ್ಲಿ, 44 ಬಾಲ್​ಗೆ 64 ರನ್​ ಪಡೆದು ವಿಕೆಟ್​ ಉಳಿಸಿಕೊಂಡರು. ಮಿಂಚಿನ ಆಟವಾಡುತ್ತಿದ್ದ ಸೂರ್ಯಕುಮಾರ್​ ಯಾದವ್​ 16 ಬಾಲ್​ಗೆ 30 ರನ್​ ಪಡೆದು ಔಟಾದರು. ವಿರಾಟ್​ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net