T20WorldCup: ಬಾಂಗ್ಲಾಗೆ 185 ರನ್​ ಗುರಿ ನೀಡಿದ ಭಾರತ, ಅರ್ಧ ಶತಕ ಸಿಡಿಸಿದ ವಿರಾಟ್​- ರಾಹುಲ್​

virat
Published on

ಅಡಿಲೇಡ್​: ಐಸಿಸಿ ಟಿ-20 ವಿಶ್ವಕಪ್​ನ 4ನೇ ಲೀಗ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ಬಾಂಗ್ಲಾ ಟೀಂಗೆ 185 ರನ್​ಗಳ ಗುರಿ ನೀಡಿದೆ. ವಿರಾಟ್​ ಕೊಹ್ಲಿ ಮತ್ತು ಕೆ.ಎಲ್​.ರಾಹುಲ್​ ಇಬ್ಬರೂ ಅರ್ಧಶತಕ ಬಾರಿಸುವ ಮೂಲಕ ರನ್​ಗಳ ಮೊತ್ತ ಹೆಚ್ಚಿಸಿದ್ದಾರೆ.

ಅಡಿಲೇಡ್​ನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಬುಧವಾರ ಬಾಂಗ್ಲಾ ಮತ್ತು ಭಾರತ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. 20 ಓವರ್​ನಲ್ಲಿ 6 ವಿಕೆಟ್​ ಕಳೆದುಕೊಂಡ ಭಾರತ ತಂಡ 184 ರನ್​ ಪಡೆದಿದೆ.

ಟಿ20 ವಿಶ್ವಕಪ್​ನ ಟೂರ್ನಿಯ ಮೊದಲ ಮೂರು ಪಂದ್ಯದಲ್ಲಿ ಕೇವಲ 22 ರನ್​ ಗಳಿಸಿ ವೈಫಲ್ಯ ಕಂಡಿದ್ದ ಉಪನಾಯಕ ಕೆ.ಎಲ್​ ರಾಹುಲ್​, ಇಂದಿನ ಪಂದ್ಯದಲ್ಲಿ ಈಗಾಗಲೇ ಅರ್ಧ ಶತಕ ಬಾರಿಸಿದ್ದಾರೆ. 32 ಬಾಲ್​ಗೆ 50 ರನ್​ ಪಡೆದ ರಾಹುಲ್​, ಶಾಕಿಬ್​ ಅಲ್​ ಹಸನ್​ ಅವರ ಬೌಲಿಂಗ್​ನಲ್ಲಿ ಮುಸ್ತಫಿಜುರ್​ ರಹಮಾನ್​ಗೆ ವಿಕೆಟ್​ ಒಪ್ಪಿಸಿದರು. ಕೊನೇವರೆಗೂ ಆಟವಾಡಿದ ವಿರಾಟ್​ ಕೊಹ್ಲಿ, 44 ಬಾಲ್​ಗೆ 64 ರನ್​ ಪಡೆದು ವಿಕೆಟ್​ ಉಳಿಸಿಕೊಂಡರು. ಮಿಂಚಿನ ಆಟವಾಡುತ್ತಿದ್ದ ಸೂರ್ಯಕುಮಾರ್​ ಯಾದವ್​ 16 ಬಾಲ್​ಗೆ 30 ರನ್​ ಪಡೆದು ಔಟಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net