ಎಸ್‌ವೈಎಸ್ ಸೌಹಾರ್ದ ಸಂಚಾರ ಜಾಥಾ

02
Published on

ಕಡಬ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್‌ವೈಎಸ್)ದ ರಾಜ್ಯ ಸಮಿತಿ ನೇತೃತ್ವದಲ್ಲಿ ಸೌಹಾರ್ದ ಸಂಚಾರ ಜಾಥಾ ಕಡಬದಲ್ಲಿ ನಡೆಯಿತು.

ಕುಂದಾಪುರದಿಂದ ಹೊರಟು ಸುಳ್ಯದ ತನಕ ಅವಿಭಜಿತ ದ.ಕ. ಜಿಲ್ಲೆಯ ಒಟ್ಟು 15 ಕೇಂದ್ರಗಳಲ್ಲಿ ಎಲ್ಲ ಪಕ್ಷ, ಜಾತಿ, ಮತ, ಪಂಥಗಳ ಜನರನ್ನು ಒಗ್ಗೂಡಿಸಿಕೊಂಡು ಕೈ ಕೈ ಹಿಡಿದು ಕಾಲ್ನಡಿಗೆಯಲ್ಲಿ ಸಾಗುವ ವಿಶೇಷವಾದ ಜಾಥಾವನ್ನು ಕಡಬದ ಬಾಜಿನಡಿ ದರ್ಗಾದ ಬಳಿ ಸ್ವಾಗತಿಸಲಾಯಿತು. ಅಲ್ಲಿಂದ ಕಡಬದ ರಾಜಬೀದಿಯಲ್ಲಿ ಸಾಗಿದ ಜಾಥಾ ಕಡಬದ ಬಸ್ ನಿಲ್ದಾಣ ಬಳಿ ಸಮಾವೇಶಗೊಂಡಿತು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ವಾಗ್ಮಿ ಡಾ.ಎಂ.ಎಸ್.ಎಂ.ಝೈನಿ ಸೌಹಾರ್ದ ಸಂದೇಶ ಭಾಷಣ ಮಾಡಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಹದಿ ಬೆಂಗಳೂರು, ಕಡಬದ ಸೇಂಟ್ ಜೋಕಿಮ್ ಚರ್ಚ್ ಧರ್ಮಗುರು ಪ್ರಕಾಶ್ ಪಾವ್ಲ್ ಡಿಸೋಜ ಹಾಗೂ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಶುಭಹಾರೈಸಿದರು. ಹಂಝ ಮದನಿ ಆಶಯ ಭಾಷಣ ಮಾಡಿದರು. ಮರ್ದಾಳದ ಸಾಹುಲ್ ಹಮೀದ್ ತಂಙಲ್ ದುವಾಃ ನೆರವೇರಿಸಿದರು.

ಎಸ್‌ವೈಎಸ್ ಕರ್ನಾಟಕ ರಾಜ್ಯ ಮಾಜಿ ಅಧ್ಯಕ್ಷ ಅಫೀಲ್ ಸಹದಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಮನ್ಸೂರ್ ಕೋಟೆಗದ್ದೆ, ರಾಜ್ಯ ನಾಯಕರಾದ ಇಸ್ಮಾಯಿಲ್ ತಂಙಲ್ ಉಜಿರೆ, ಇಲ್ಯಾಸ್ ತಂಙಲ್, ಇಬ್ರಾಹಿಂ ಖಲೀಲ್, ಹಸೈನಾರ್ ಆನೆಮಹಲ್, ಹಮೀದ್ ಕೊಯಿಲ, ಅಶ್ರಫ್ ಸಅದಿ ಮಲ್ಲೂರು, ಶಾಫಿ ಸಖಾಫಿ ಕೊಕ್ಕಡ, ಜಿಪಂ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸಯ್ಯದ್ ಮೀರಾ ಸಾಹೇಬ್, ತಾಪಂ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಮತ್ತಿತರರಿದ್ದರು. ಕೆ.ಎಚ್.ಹಂಝ ಕಳಾರ ನಿರೂಪಿಸಿದರು. ಹಾಫಿಲ್ ಫಾರೂಕ್ ಹಿಮಮಿ ಸಖಾಫಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net