ನೊಂದವರ ಬಾಳಿಗೆ ಬೆಳಕಾಗುವುದು ಸಮಾಜ ಸೇವೆ : ಸಂಸದ ಕ್ಯಾ.ಬ್ರಿಜೇಸ್ ಚೌಟ ಅನಿಸಿಕೆ

6
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 41ನೇ ಸಂಭ್ರಮಾಚರಣೆ ಪ್ರಯುಕ್ತ ಪುಂಜಾಲಕಟ್ಟೆಯಲ್ಲಿ ಭಾನುವಾರ ನಡೆದ 17ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿ ವಧು-ವರರು ಗ್ರಹಸ್ಥಾಶ್ರಮಕ್ಕೆ ಪಾದರ್ಪಣೆಗೈದರು.

ಅರ್ಚಕ ಶ್ರೀ ಕೃಷ್ಣ ಭಟ್ ಕಾರ್ಕಳ ಮತ್ತು ತಂಡದ ಪೌರೋಹಿತ್ಯದಲ್ಲಿ ಮಧ್ಯಾಹ್ನ 12.4ರ ಶುಭ ಮುಹೂರ್ತದಲ್ಲಿ 7 ಜೋಡಿ ವಧು-ವರರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು. ಬೆಳಗ್ಗೆ ನಯನಾಡು ಶ್ರೀ ರಾಮ ಭಜನಾ ಮಂದಿರದಿಂದ ಮದುವೆ ಮಂಟಪದವರೆಗೆ ದಿಬ್ಬಣ ಮೆರವಣಿಗೆ ನಡೆಯಿತು.

ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿ ಮಾತನಾಡಿ, ನೊಂದವರ ಬಾಳಿಗೆ ಬೆಳಕಾವುದು ನಿಜವಾದ ಸಮಾಜ ಸೇವೆಯಾಗಿದ್ದು, ತುಂಗಪ್ಪ ಬಂಗೇರ ಮತ್ತವರ ತಂಡದ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ಭವಿಷ್ಯದ ದಿನಗಳಲ್ಲಿ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಬಂಟ್ವಾಳ ತಾ.ಸಂಸ್ಕಾರ ಭಾರತಿ ಅಧ್ಯಕ್ಷರು, ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಅದಾನಿ ಗ್ರೂಪ್ ಮಂಗಳೂರು ಅಧ್ಯಕ್ಷ ಕಿಶೋರ್ ಆಳ್ವ, ಜಗನ್ನಾಥ ಬಂಗೇರ, ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ವ್ಯ.ಸೇ.ಸ.ಸಂಘ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಪಿಲಾತಬೆಟ್ಟು ಕೃ.ಪ.ಸ.ಸಂಘ ಉಪಾಧ್ಯಕ್ಷ ರವಿಶಂಕರ್ ಹೊಳ್ಳ, ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ವಾಮದಪದವು ಕೃ.ಪ.ಸ.ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಶ್ರೀ.ಕ್ಷೇ.ಧ.ಗ್ರಾ.ಯೋ.ಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಉದ್ಯಮಿಗಳಾದ ಹರೀಂದ್ರ ಪೈ, ಜಯಚಂದ್ರ ಬೊಳ್ಮಾರ್, ಪಿಲಾತಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಬಡಗಕಜೆಕಾರು ಕೃ.ಪ.ಸ.ಸಂಘ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿ ಕರುಣಾಕರ ಪೂಜಾರಿ ಮಾಳಿಗೆ ಮನೆ, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರ.ಕಾರ್ಯದರ್ಶಿ ಪ್ರಶಾಂತ್, ಕುತ್ತಿಲ ಗರಡಿ ಸಮಿತಿ ಅಧ್ಯಕ್ಷ ಸುಶಾಂತ್ ಕರ್ಕೇರ, ಉದ್ಯಮಿ ಸುರೇಶ್ ಕರ್ಕೇರ, ಸಿದ್ದಕಟ್ಟೆ ಕೃ.ಪ.ಸ.ಸಂಘ ಅಧ್ಯಕ್ಷೆ ಪ್ರಭಾಕರ ಪ್ರಭು,ನ್ಯಾಯವಾದಿ ಅನಿಲ್ ಕುಮಾರ್, ತುಂಬೆ ಗ್ರಾಪಂ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಸುನೀಲ್ ಗಾಯಕವಾಡ್ ಮುಂಬೈ, ಕೊರಂಟಬೆಟ್ಟ ಗರಡಿ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಕೊರಂಟಬೆಟ್ಟು ಭಾಗವಹಿಸಿದ್ದರು.

ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಪದಾಕಾರಿಗಳಾದ ಮಾಧವ ಬಂಗೇರ, ಜಯರಾಜ್ ಅತ್ತಾಜೆ ಮೊದಲಾದವರಿದ್ದರು. ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವಿಸಿ ಇದುವರೆಗೆ 498 ಜೋಡಿಗಳಿಗೆ ವಿವಾಹ ಮಾಡಲಾಗಿದೆ. ಸಾಮೂಹಿಕ ವಿವಾಹಗಳಿಗೆ ಕೇಂದ್ರ ಸರ್ಕಾರ ಒತ್ತು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಸಂಸದರಲ್ಲಿ ಮನವಿ ಮಾಡಿದರು. ರಂಗಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಹರೀಶ್ ಪೂಜಾರಿ(ಉದ್ಯಮ), ಅಬ್ದುಲ್ ಕುಂಞಿ(ಸಮಾಜ ಸೇವೆ), ಸಾಯಿ ಸುಮಾ ನಾವಡ(ಯಕ್ಷಗಾನ), ಶಶಿಧರ ಆಚಾರ್ಯ (ಶಿಲ್ಪಕಲೆ), ಸಂದೇಶ್ ಮದ್ದಡ್ಕ(ಧಾರ್ಮಿಕ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತರಾದ ಐ.ಬಿ. ಸಂದೀಪ್ ಜೈನ್, ಹರೀಶ್ ಮಾಂಬಾಡಿ, ರಮೇಶ್ ನಾಯ್ಕ, ಚಂದ್ರಹಾಸ ಕಡೆಗೋಲಿ, ಆದರ್ಶ್ ಶೆಟ್ಟಿ, ಡಿ.ಎಸ್.ಬೋಳೂರು, ರಮೆಶ್ ಶೆಟ್ಟಿ ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net