ಮಂಜೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ವರ್ಧಂತಿ

New Project (1)
Published on

ಮಂಜೇಶ್ವರ : ಶ್ರೀಮದ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಇದರ 221ನೇ ವರ್ಷದ ಪುನರ್‌ಪ್ರತಿಷ್ಠಾಪನೆ ವರ್ಧಂತಿ ಹಾಗೂ ಬೆಳ್ಳಿ ಲಾಲ್ಕಿಯ 150ನೇ ವರ್ಷದ ಸಂಭ್ರಮೋತ್ಸವ ವಿಜೃಂಭಣೆಯಿಂದ ದೇವಳದ ಸ್ವಯಂಸೇವಕರಿಂದ ನೆರವೇರಿತು. ಬೆಳಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾಹ್ನ ಸಮಾಜದವರಿಂದ ಶ್ರೀ ನರಸಿಂಹ ಸ್ತುತಿ ಪಠಣದೊಂದಿಗೆ ಪ್ರದಕ್ಷಿಣಾ ಸೇವೆ ನೆರವೇರಿ ಸಮೃದ್ಧ ನಿರೀಕ್ಷಣಾ ವಸ್ತುಗಳನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಯಿತು . ರಾತ್ರಿ 150ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ, ವಾದ್ಯಗೋಷ್ಠಿ , ಕಣ್ಮನ ತಣಿಸುವ ವಿಶೇಷ ದೀಪಾರಾಧನೆ ನೆರವೇರಿತು. ದೇವಳದ ಆಡಳಿತ ಮಂಡಳಿಯವರು, ಅರ್ಚಕರು ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net