ಕಡಬದಲ್ಲಿ ಭವ್ಯ ಸ್ವಾಗತ

Kdb_Nandi Ratha
Published on

ಕಡಬ: ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ ಹಾಗೂ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್‌ನ ಆಶ್ರಯದಲ್ಲಿ ಗೋ ಸಂತತಿ ರಕ್ಷಣೆ, ಗೋ ಉತ್ಪನ್ನಗಳ ಪ್ರಚಾರ ಹಾಗೂ ಮಣ್ಣು ಉಳಿಸುವ ನಂದಿ ಕೃಷಿ ಜಾಗೃತಿ ಅಭಿಯಾನದ ಪ್ರಯುಕ್ತ ಸಂಚರಿಸುತ್ತಿರುವ ನಂದಿ ರಥಯಾತ್ರೆಗೆ ಶುಕ್ರವಾರ ಕಡಬ ಪೇಟೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವಠಾರದಲ್ಲಿ ಗೋ ಮಾತೆಗೆ ಜಯಘೋಷ ಮೊಳಗಿಸಿ ನಂದಿ ರಥದಲ್ಲಿದ್ದ ಗೋವುಗಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂದಿ ರಥ ಯಾತ್ರೆಯ ಕಡಬ ತಾಲೂಕು ಸಂಯೋಜಕ ಕಿಶೋರ್ ಶಿರಾಡಿ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ರವಿರಾಜ್ ಶೆಟ್ಟಿ ಕಡಬ, ರಾಧಾಕೃಷ್ಣ ಗೌಡ ಕೋಲ್ಪೆ, ಸೀತಾರಾಮ ಗೌಡ ಎ., ಪುಲಸ್ತ್ಯಾ ರೈ, ಪ್ರಮೀಳಾ ಲೋಕೇಶ್, ಸವಿತಾ ಭಟ್ ಪಾಜೋವು, ಪ್ರಮೋದ್ ರೈ ನಂದುಗುರಿ, ಅಜಿತ್ ರೈ ಆರ್ತಿಲ, ಮಾಧವ ಕೋಲ್ಪೆ, ಶ್ರೀ ಕೃಷ್ಣ ಎಂ.ಆರ್., ದೇವಿಪ್ರಸಾದ್ ಮರ್ದಾಳ, ರಘುರಾಮ ನಾಕ್ ಕುಕ್ಕೆರೆಬೆಟ್ಟು, ಶಿವಪ್ರಸಾದ್ ರೈ ಮೈಲೇರಿ, ವಾಸುದೇವ ಬೈಪಾಡಿತ್ತಾಯ, ವಿಶ್ರುತಾ ರಾಜೇಶ್, ನವ್ಯಾ ಕೃಷ್ಣ, ಚಂದ್ರಶೇಖರ ಹಳೆನೂಜಿ ಮುಂತಾದವರು ಉಪಸ್ಥಿತರಿದ್ದರು.

ಗುಂಡ್ಯದಲ್ಲಿ ಸ್ವಾಗತ

ಸಕಲೇಶಪುರದಿಂದ ಆಗಮಿಸಿದ ರಥವನ್ನು ಗುಂಡ್ಯದಲ್ಲಿ ಕಡಬ ತಾಲೂಕಿಗೆ ಬರಮಾಡಿಕೊಳ್ಳಲಾಯಿತು. ನೆಲ್ಯಾಡಿ ಹೊಸಮಜಲು ಮೂಲಕ ಸಂಚರಿಸಿದ ರಥಕ್ಕೆ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ ವಠಾರದಲ್ಲಿ ಪೂಜೆ ಸಲ್ಲಿಸಲಾಯಿತು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವಠಾರದಿಂದ ಹೊರಟ ರಥ ಮರ್ದಾಳ, ಬಿಳಿನೆಲೆ, ಕುಲ್ಕುಂದ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net