

ಮೂಡುಬಿದಿರೆ: ಇಲ್ಲಿನ ಸವಾಜ ಮಂದಿರ ಸಭಾ ವತಿಯಿಂದ ಜರಗುವ ಈ ಬಾರಿಯ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಅವರಿಗೆ ಸವಾಜ ಮಂದಿರ ಪುರಸ್ಕಾರ- 2024 ಪ್ರದಾನ ನಡೆಯಲಿದೆ.
ಅ.3ರಿಂದ 7ರವರೆಗೆ ಉತ್ಸವ ನಡೆಯಲಿದ್ದು, ಮೊದಲ ದಿನ ಉದ್ಘಾಟನಾ ಸವಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್.ಧರ್ಮ ಮೂಡುಬಿದಿರೆ ದಸರಾ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ವಾಡಲಿರುವರು. ಸಾಹಿತ್ಯ, ಕಲೆ, ಸಂಸ್ಕೃತಿ ಸಹಿತ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡ ಆಯ್ದ 17 ಸಾಧಕರಿಗೆ, ಸಂಸ್ಥೆಗಳಿಗೆ ದಸರಾ ಉತ್ಸವದ ಅವಧಿಯಲ್ಲಿ ಸವಾಜ ಮಂದಿರ ಗೌರವ ಪ್ರದಾನ ವಾಡಲಾಗುವುದು ಎಂದು ಎಂದು ಸವಾಜ ಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ- ಸಾಂಸ್ಕೃತಿಕ, ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್- ಸಾಂಸ್ಕೃತಿಕ, ಶ್ರೀ ವೀರವಾರುತಿ ಸೇವಾ ಟ್ರಸ್ಟ್- ಸಾಂಸ್ಕೃತಿಕ, ಅಂಡಾರು ಗುಣಪಾಲ ಹೆಗ್ಡೆ- ಶೈಕ್ಷಣಿಕ, ರಾಮ ಕೋಟ್ಯಾನ್- ಛಾಯಾಗ್ರಹಣ, ಗುಲಾಬಿ ಶೆಟ್ಟಿ- ಆರೋಗ್ಯ, ಧನಂಜಯ ಮೂಡುಬಿದಿರೆ- ಪತ್ರಿಕೋದ್ಯಮ, ಟಿ.ರುವೀರ ಶೆಣೈ- ಸವಾಜಸೇವೆ, ಆಂಡ್ರ್ಯೂ ಡಿಸೋಜ- ರಂಗಭೂಮಿ, ಜಗದೀಶ್- ವೈದ್ಯಕೀಯ, ಚಂದ್ರಶೇಖರ್- ಸವಾಜಸೇವೆ, ಸುಜಾತಾ ಶೆಟ್ಟಿ- ರಂಗಭೂಮಿ, ನಾಗರಾಜ ಶೆಟ್ಟಿ ಅಂಬೂರಿ ಬೆಳುವಾಯಿ- ಕೃಷಿ, ನಾರಾಯಣ ಆಚಾರ್ಯ ಸಂಪಿಗೆ- ಕಾಷ್ಠಶಿಲ್ಪ, ಅನಿತಾ ಶೆಟ್ಟಿ- ಸಾಹಿತ್ಯ, ಬಾಬು ಹಂಡೇಲು- ಸವಾಜಸೇವೆ, ಅಬ್ದುಲ್ ಸಲಾಂ- ಕಲೆ. ಸಾಹಿತ್ಯ.