ಯುವಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಉಗ್ರರ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದ ಶಂಕಿತ ಉಗ್ರ!

NIA
Published on

ಬೆಂಗಳೂರು: ಭಾರತದಲ್ಲಿ ಒಟ್ಟು ಎರಡು ಕಡೆ ದಾಳಿ ನಡೆಸಿದ ಎನ್ಐಎ ಇಬ್ಬರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಥಣಿಸಂದ್ರ ಹಾಗೂ ಮುಂಬೈನ ಪಲ್ಗಾರ್​ನಲ್ಲಿ ಎನ್​ಐಎ ದಾಳಿ ನಿನ್ನೆ(ಫೆ.11) ನಡೆದಿತ್ತು. ಎನ್ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಐಎಸ್​ಡಿ ಜೊತೆ ಸೇರಿಕೊಂಡು ದಾಳಿ ನಡೆಸಿದ್ದರು.

ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸುತ್ತಿರುವ ಎನ್ಐಎ ಅಧಿಕಾರಿಗಳಿಗೆ, ಇಬ್ಬರು ಶಂಕಿತರು ವಿದೇಶಿ ಮೂಲದ ಉಗ್ರ ಸಂಘಟನೆಗೆ ಸೇರಿದ ಹ್ಯಾಂಡ್ಲರ್ಸ್​​ಗಳ ಜತೆಗೆ ಆನ್‌ಲೈನ್ ಸಂಪರ್ಕ ಸಾಧಿಸಿರುವ ಅಂಶ ಗೊತ್ತಾಗಿದೆ. ಶಂಕಿತರು ಸಾಮಾಜಿಕ ಜಾಲತಾಣ ಮೂಲಕ ಯುವಕರನ್ನ ಸೆಳೆದು, ಉಗ್ರ ಕೃತ್ಯ, ಹಿಂಸೆ, ಪ್ರಚೋದನೆಗೆ ಒಳಸಂಚು ರೂಪಿಸುತ್ತಿದ್ದರು ಎಂಬ ಆಘಾತಕಾರಿ ವಿಚಾರ ಪ್ರಾಥಮಿಕಿ ತನಿಖೆಯಿಂದ ಹೊರಬಿದ್ದಿದೆ.ದಾಳಿ ವೇಳೆ ಹಲವು ವಿಧದ ಡಿಜಿಟಲ್‌ ಡಿವೈಎಸ್​ ಮತ್ತು ದಾಖಲೆಗಳನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ತಿಲಕ್ ನಗರದಲ್ಲಿ ಇಬ್ಬರು ಶಂಕಿತ ಉಗ್ರರಾದ ಆಖ್ತರ್ ಹುಸೇನ್ ಮತ್ತು ಜುಬಾ ಎಂಬುವವರ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಎನ್​ಐಎ ಅಧಿಕಾರಿಗಳು ತನಖೆ ಮಾಡಿದ್ದರು. ಬಂಧಿತರಾದ ಶಂಕಿತರು ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನ ಸೆಳೆಯುವ ಯತ್ನ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಹೀಗಾಗಿ ಎನ್​ಐಎ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮುಂದಾಗಿದ್ದರು.

ಈ ಪ್ರಕರಣ ಸಂಬಂಧ ನಿಗಾ ವಹಿಸಿದ್ದ ಎನ್ಐಎ, ಸೆಪ್ಟೆಂಬರ್​ನಲ್ಲಿ ಬಂಧಿತರಾಗಿರುವ ಶಂಕಿತರು ಹಾಗೂ ನಿನ್ನೆ ಬಂಧಿತರಾಗಿರು ಇಬ್ಬರು ಶಂಕಿತರು ಪರಿಚಯಸ್ಥರಾಗಿದ್ದರು ಎಂಬ ಅನುಮಾನದಲ್ಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಇಬ್ಬರನ್ನೂ ಎನ್ಐಎ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net