

ಕೊಕ್ಕಡ: ವಿಪರೀತ ಜ್ವರದಿಂದ ಬಳಲುತ್ತಿದ್ದ ಪಟ್ರಮೆ ಗ್ರಾಮದ ಅಟ್ಟೆಕಲ್ಲು ನಿವಾಸಿ ಕೊರಗಪ್ಪ ನಾಯ್ಕ(56) ಜೂ.27ರಂದು ನಿಧನರಾಗಿದ್ದಾರೆ. ಕಳೆದೆರಡು ದಿನಗಳಿಂದ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಕೊಕ್ಕಡ ಸಮುದಾಯ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಡೆಂಘೆ ಜ್ವರದ ಆರಂಭಿಕ ಲಕ್ಷಣ ಕಂಡುಬಂದಿತ್ತು. ವೈದ್ಯರು ಪರೀಕ್ಷಿಸಿ ಔಷಧ ನೀಡಿ ಮರುದಿನವೂ ಚಿಕಿತ್ಸೆಗೆ ಬರುವಂತೆ ಸೂಚಿಸಿದ್ದರು. ಆದರೆ ಕೊರಗಪ್ಪ ನಾಯ್ಕರು ಚಿಕಿತ್ಸೆಗೆ ಮತ್ತೆ ಆಸ್ಪತ್ರೆಗೆ ತೆರಳಲಿಲ್ಲ. ಆಶಾ ಕಾರ್ಯಕರ್ತೆಯರು ಅವರ ಮನೆಗೆ ತೆರಳಿ ಮನವೊಲಿಸಲು ಪ್ರಯತ್ನಿಸಿದರೂ ಅವರು ಕೇಳಲಿಲ್ಲ. ಗುರುವಾರ ಜ್ವರ ವಿಪರೀತಗೊಂಡ ಕಾರಣ ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿರುವಾಗಲೇ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.