ಧರೆ ಕುಸಿತ ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು ಪಾರು

WhatsApp-Image-2024-06-27-at-6.52.09-AM-2-1024x576
Published on

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬನ್ನೂರು ಜೈನಗುರಿಯಲ್ಲಿ ಧರೆ ಕುಸಿತವಾಗಿ ಮನೆಯ ಗೋಡೆ ಬಿದ್ದಿದೆ.

ಜೈನಗುರಿ ಮಜೀದ್ ಅವರಿಗೆ ಸೇರಿದ ಮನೆಯಾಗಿದ್ದು, ಬೆಳಗ್ಗಿನ ಜಾವ ಮನೆಯ ಪಕ್ಕದ ಧರೆ ಕುಸಿತವಾಗಿದೆ. ಇದರ ತೀವ್ರತೆಗೆ ಮನೆಯ ಗೋಡೆಯೂ ಬಿದ್ದಿದೆ. ಈ ಸಂದರ್ಭ ಇಬ್ಬರು ಮಕ್ಕಳು ಮಣ್ಣಿನಲ್ಲಿ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ನಗರ ಸಭೆ ಅಧಿಕಾರಿಗಳು ಬೇಟಿ ನೀಡಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net