More

    ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

    ಮುಂಬೈ: ಸದ್ಯ ಬಾಲಿವುಡ್​ನಲ್ಲಿ ಲಲಿತ್​ ಮೋದಿ ಹಾಗೂ ಸುಷ್ಮಿತಾ ಸೇನ್​​ ಡೇಟಿಂಗ್​ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ತನ್ನ ಅರ್ಧಾಂಗಿ ಎಂದು ಟ್ವಿಟ್ಟರ್​ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್​ ನೀಡಿದ್ದ ಮೋದಿ ನಂತರ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದರು.1994ರಲ್ಲಿ ವಿಶ್ವ ಸುಂದರಿ ಪಟ್ಟ ಅಂಲಕರಿಸಿರುವ ಸುಶ್ಮಿತಾ ಸೇನ್​​ ಸದ್ಯ ಲಲಿತ್ ಮೋದಿ ಜತೆ ಡೇಟಿಂಗ್​ನಲ್ಲಿದ್ದಾರೆ. ಹೀಗೆಂದು ಲಲಿತ್ ಮೋದಿಯೇ ಟ್ವೀಟ್​ ಮಾಡಿ ಸ್ಪಷ್ಟನೆ ಕೂಡ ನೀಡಿದ್ದಾರೆ.

    ತನಗಿಂತ ಚಿಕ್ಕ ವಯಸ್ಸಿನವನ ಜತೆ ಹಲವು ವರ್ಷಗಳ ಕಾಲ ಲಿವ್​ ಇನ್​ ರಿಲೇಷನ್​ನಲ್ಲಿದ್ದ ಸುಷ್ಮಿತಾ ಸೇನೆ ಇತ್ತೀಚೆಗೆ ದಿಢೀರ್ ತಾವಿಬ್ಬರೂ ತಮ್ಮ ಪ್ರೀತಿಯನ್ನು ಮುರಿದುಕೊಂಡಿದ್ದೇವೆ ಎಂದು ಘೋಷಿಸಿದ್ದರು. ಇದಾದ ಬಳಿಕ ಇದೀಗ ಮತ್ತೆ ಸುಷ್ಮಿತಾ ಪ್ರೀತಿಯಲ್ಲಿರುವುದು ಬಹಿರಂಗಗೊಂಡಿದೆ.

    ಸದ್ಯ ಈ ಇಬ್ಬರ ಡೇಟಿಂಗ್​ ಬಗ್ಗೆ ಸುಷ್ಮಿತಾ ಮಾಜಿ ಪ್ರಿಯಕರ ಹೇಳಿದ್ದು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಸುಷ್ಮಿತಾ ಜತೆ ಹಲವು ವರ್ಷಗಳ ಕಾಲ ಡೇಟಿಂಗ್​ ನಡೆಸಿದ್ದ ರೊಹಮನ್​ ಶಾಲ್, ನಾವು ಅವರಿಗಾಗಿ ಸಂತೋಷವಾಗಿರೋಣ, ಪ್ರೀತಿ ಸುಂದರವಾಗಿದೆ, ಆಕೆ ಯಾರನ್ನಾದರು ಆರಿಸಿದ್ದರೆ ಅವರು ಯೋಗ್ಯನೇ ಆಗಿರುತ್ತಾನೆ ಎಂದಿದ್ದಾರೆ.

    ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ 2010ರಲ್ಲಿ ಲಲಿತ್ ಮೋದಿ ಭಾರತ ತೊರೆದಿದ್ದಾರೆ. ಸುಶ್ಮಿತಾ ಸೇನ್​​ 1994ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿದ್ದು, 1996ರಲ್ಲಿ ದಸ್ತಕ್ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು.

    ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆಂದು ಅನೇಕ ಸಲ ಸುದ್ದಿ ಹಬ್ಬಿತ್ತು. ಈ ಹಿಂದೆಯೇ ಇಬ್ಬರು ಪ್ರೀತಿಯಲ್ಲಿದ್ದುದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಇದೀಗ ಇವರಿಬ್ಬರ ನಡುವೆ ಮತ್ತೆ ಪ್ರೀತಿ ಚಿಗುರೊಡೆದಿದ್ದು, ಇದಕ್ಕೆ ಟ್ವೀಟ್ ಮೂಲಕ ಲಲಿತ್ ಮೋದಿ ಕೂಡ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts