

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಅಂಲಕರಿಸಿರುವ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
'ನನ್ನ ಬೆಟರ್ ಹಾಫ್ ಪಾಲುದಾರ' ಎಂದು ಸುಶ್ಮಿತಾ ಸೇನ್ ಜೊತೆಗಿನ ಕೆಲವೊಂದು ಫೋಟೋ ಹಂಚಿಕೊಂಡಿದ್ದಾರೆ. ಐಪಿಎಲ್ ಮಾಜಿ ಚೇರ್ಮನ್ ಆಗಿರುವ ಲಲಿತ್ ಮೋದಿ ಸದ್ಯ ಲಂಡನ್ನಲ್ಲಿ ವಾಸವಾಗಿದ್ದಾರೆ.
ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ 2010ರಲ್ಲಿ ಲಲಿತ್ ಮೋದಿ ಭಾರತ ತೊರೆದಿದ್ದಾರೆ. ಸುಶ್ಮಿತಾ ಸೇನ್ 1994ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿದ್ದು, 1996ರಲ್ಲಿ ದಸ್ತಕ್ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದರು.
ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆಂದು ಅನೇಕ ಸಲ ಸುದ್ದಿ ಸಹ ಬಿತ್ತರಗೊಂಡಿತ್ತು. ಆದರೆ, ಇದೀಗ ಟ್ವೀಟ್ ಮೂಲಕ ಲಲಿತ್ ಮೋದಿ ಸ್ಪಷ್ಟನೆ ನೀಡಿದ್ದು, ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.