More

    ಗ್ಯಾಂಗ್​​ಸ್ಟರ್ ಕಾಲಾ ಜತೇದಿ ಸೋದರನೊಂದಿಗೆ ಸುಶೀಲ್​ ಕುಮಾರ್ !

    ನವದೆಹಲಿ : ಎರಡು ಬಾರಿ ಒಲಂಪಿಕ್ ಪದಕ ಗೆದ್ದಿರುವ ಭಾರತದ ಕುಸ್ತಿಪಟು ಸುಶೀಲ್ ಕುಮಾರ್​ ಅವರು, ಗ್ಯಾಂಗ್​ಸ್ಟರ್​ ಕಾಲಾ ಜತೇದಿಯ ಸೋದರ ಪ್ರದೀಪ್ ಜೊತೆಗಿರುವ ಹಳೆಯ ಚಿತ್ರವೊಂದು ಇದೀಗ ವೈರಲ್ ಆಗಿದೆ. ಮತ್ತೊಬ್ಬ ಕುಸ್ತಿಪಟು ಸಾಗರ್​ ರಾಣ ಕೊಲೆ ಪ್ರಕರಣದಲ್ಲಿ 6 ದಿನಗಳ ಪೊಲೀಸ್​ ಕಸ್ಟಡಿಯಲ್ಲಿರುವ ಸುಶೀಲ್​​ಗೆ ಈ ಹಳೆಯ ನಂಟು ಇನ್ನಷ್ಟು ಸಮಸ್ಯೆ ಉಂಟುಮಾಡಲಿದೆಯೆ ಕಾದುನೋಡಬೇಕು.

    ದೆಹಲಿ ಪೊಲೀಸರ ಪ್ರಕಾರ ಸುಶೀಲ್ ಅವರ ಎಡಪಕ್ಕದಲ್ಲಿ ಬಿಳಿಯ ಅಂಗಿ ಧರಿಸಿ ಕುಳಿತಿರುವ ಪ್ರದೀಪ್, ಕಾಲಾ ಜತೇದಿಯ ಸೋದರ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರದೀಪ್ ಪತ್ತೆಗೆ ಪೊಲೀಸರು 7 ಲಕ್ಷ ರೂ.ಗಳ ಬಹುಮಾನ ಇಟ್ಟಿದ್ದಾರೆ. ಡಿಸೆಂಬರ್ 18, 2018 ರ ಈ ಚಿತ್ರವನ್ನು ಭಾಯಿಚಾರಾ @ಪೆಹಲ್ವಾನ್​ಜಿ ಎಂಬ ಶೀರ್ಷಿಕೆಯೊಂದಿಗೆ ಫೇಸ್​ಬುಕ್​ನಲ್ಲಿ ಶೇರ್ ಮಾಡಲಾಗಿದೆ.

    ಇದನ್ನೂ ಓದಿ: 2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು

    ಸಾಗರ್​ ಕೊಲೆ ಪ್ರಕರಣದಲ್ಲಿ ಸುಶೀಲ್ ಮತ್ತು ಅವರ ಸಹಚರ ಅಜಯ್​ಕುಮಾರ್​, 15 ದಿನಗಳವರೆಗೆ ತಲೆಮರೆಸಿಕೊಂಡಿದ್ದು, ಕೊನೆಗೂ ದೆಹಲಿ ಪೊಲೀಸರ ವಶವಾಗಿದ್ದಾರೆ. ವಿಚಾರಣೆ ವೇಳೆಯಲ್ಲಿ ಸುಶೀಲ್, ಯಾರೂ ತಮ್ಮನ್ನು ದುರ್ಬಲ ಎಂದುಕೊಳ್ಳಬಾರದೆಂದು ಮೃತ ಸಾಗರ್​​ಗೆ ಪಾಠ ಕಲಿಸಬೇಕೆಂದು ಭಾವಿಸಿದ್ದರೂ, ಆತನನ್ನು ಕೊಲೆ ಮಾಡುವ ಯಾವುದೇ ಇರಾದೆ ಇರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಸುಶೀಲ್ ಮತ್ತು ಸಾಗರ್​ ನಡುವೆ ದೆಹಲಿಯ ಮಾಡೆಲ್​ ಟೌನ್ ಪ್ರದೇಶದಲ್ಲಿರುವ ಸುಶೀಲ್​​ಗೆ ಸೇರಿದ ಫ್ಲ್ಯಾಟ್ ಕುರಿತು ವೈಮನಸ್ಯವಿತ್ತು. ಸಾಗರ್​ ಆ ಫ್ಲ್ಯಾಟ್​ನಲ್ಲಿ ಗ್ಯಾಂಗ್​ಸ್ಟರ್​ ಕಾಲಾ ಜತೇದಿಯ ಬಲಗೈ ಭಂಟ ಎನ್ನಲಾದ ಸೋನು ಮಹಲ್ ಎಂಬ ಮಿತ್ರನೊಂದಿಗೆ ಬಾಡಿಗೆಗೆ ವಾಸಿಸುತ್ತಿದ್ದ ಎನ್ನಲಾಗಿದೆ. (ಏಜೆನ್ಸೀಸ್)

    ಜನಹಿತ ಕಾಪಾಡೋದು ನನ್ನ ಆದ್ಯತೆ, ಬೇರೆ ಕಡೆ ಗಮನ ಇಲ್ಲ : ಬಿಎಸ್​ವೈ

    32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆ !

    ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts