More

    ವೈರಲ್​ ಆಯ್ತು ಸುಶೀಲ್​ ಕುಮಾರ್​ ದಾಳಿಯ ವಿಡಿಯೋ: ಕುಸ್ತಿಪಟು ಮೇಲಿನ ಹಲ್ಲೆ ಹಿಂದಿನ ಉದ್ದೇಶ ಬಯಲು​

    ನವದೆಹಲಿ: ಕುಸ್ತಿಪಟು ಸಾಗರ್​ ರಾಣ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 6 ದಿನಗಳ ಪೊಲೀಸ್​ ಕಸ್ಟಡಿಯಲ್ಲಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಸೇರಿ ಸಾಗರ್​ಗೆ ಥಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ತೀವ್ರ ಥಳಿತಕ್ಕೆ ಒಳಗಾದ ಕುಸ್ತಿಪಟು ಸಾಗರ್,​ ಗಂಭೀರ ಗಾಯದಿಂದ ನೆಲದ ಮೇಲೆಯೇ ನರಳಾಡಿ ಪ್ರಾಣ ಬಿಟ್ಟಿರುವುದಾಗಿ ತಿಳಿದುಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್​ನನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಕುಸ್ತಿ ಸಮುದಾಯವನ್ನು ಭಯಭೀತಗೊಳಿಸಲು ಈ ಘಟನೆಯ ವಿಡಿಯೋವನ್ನು ಸ್ನೇಹಿತನಿಂದ ರೆಕಾರ್ಡ್ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸುಶೀಲ್​ ಕುಮಾರ್​ ಮತ್ತು ಆತನ ಸ್ನೇಹಿತರು ಮೇ 4ರಂದು ಸಾಗರ್​ ಧನಕರ್​ ಮತ್ತ ಆತನ ಸ್ನೇಹಿತರಿಬ್ಬರ ಮೇಲೆ ದೆಹಲಿಯ ಛತ್ರಸಾಲ್​ ಸ್ಟೇಡಿಯಂನಲ್ಲಿ ಹಲ್ಲೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದರು. ಗಾಯಗೊಂಡ ಮೂವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾಗರ್​ ಮೃತಪಟ್ಟಿದ್ದಾರೆ.

    ಪೊಲೀಸ್​ ಬಂಧನದಿಂದ ರಕ್ಷಿಸಿಕೊಳ್ಳಲು ಮೇ 18ರಂದು ಸುಶೀಲ್​ ಕುಮಾರ್​ ದೆಹಲಿ ಕೋರ್ಟ್​ ಮೆಟ್ಟಲೇರಿದ್ದರು. ನನ್ನ ವಿರುದ್ಧದ ತನಿಖೆ ಪಕ್ಷಪಾತವಾಗಿದೆ ಮತ್ತು ಸಂತ್ರಸ್ತನಿಗಾದ ಯಾವುದೇ ಗಾಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಸುಶೀಲ್​ ವಾದಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತು. ಇದೀಗ ಬಂಧನಕ್ಕೆ ಒಳಗಾಗಿರುವ ಸುಶೀಲ್​ ಕುಮಾರ್​ ವಿಚಾರಣೆ ನಡೆಯುತ್ತಿದೆ.

    ಅಂದಹಾಗೆ ಸುಶೀಲ್​ 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. (ಏಜೆನ್ಸೀಸ್​)

    ಸೋಂಕಿತ ಮಕ್ಕಳ ಕಾಡುತ್ತಿದೆ ಹೊಸ ಸಮಸ್ಯೆ; ಕೋವಿಡ್​ನಿಂದ ಚೇತರಿಕೆ ಬಳಿಕ ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಸಿಂಡ್ರೋಮ್ ಪತ್ತೆ

    ತ್ಯಾಗ, ಹೋರಾಟದ ಧೀಮಂತ ಶಕ್ತಿ ಸಾವರ್ಕರ್

    ಬಿ-ಟೀಮ್ ತಿರುಗುಬಾಣ: ನಾಯಕತ್ವ ಬದಲಾವಣೆಗೆ ಯೋಗೇಶ್ವರ್ ಏಕಾಂಗಿ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts