ನವದೆಹಲಿ: ಮೃಗಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಹೃದಯಾಘಾತದಿಂದ ಪತಿ ಮೃತಪಟ್ಟ ಶಾಕ್ನಿಂದ ಹೊರಬರಲಾರದ ಪತ್ನಿ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ದೆಹಲಿ ಬಳಿಯ ಘಾಜಿಯಾಬಾದ್ನಲ್ಲಿ ನಡೆದಿದೆ.
ಅಭಿಷೇಕ್ ಅಹ್ಲುವಾಲಿಯ (25) ಮತ್ತು ಅಂಜಲಿ (22) ಮೃತ ದಂಪತಿ. ಪ್ರಾಪರ್ಟಿ ಡೀಲರ್ ಆಗಿರುವ ಅಹ್ಲುವಾಲಿಯ, ತನ್ನ ಪತ್ನಿ ಅಂಜಲಿ ಜತೆ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ. ಈ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದ. ಇದರಿಂದ ಗಾಬರಿಗೊಂಡ ಅಂಜಲಿ, ತಕ್ಷಣ ಗಂಡನನ್ನು ಆಸ್ಪತ್ರೆಗೆ ದಾಖಲಿಸಿ, ತನ್ನ ಫ್ರೆಂಡ್ಸ್ ಮತ್ತು ಕುಟುಂಬವನ್ನು ಸಂಪರ್ಕಿಸಿದಳು.
ಪರೀಕ್ಷೆ ಮಾಡಿದ ವೈದ್ಯರು ಅಹ್ಲುವಾಲಿಯ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಬಳಿಕ ಅಹ್ಲುವಾಲಿಯ ಮೃತದೇಹವನ್ನು ಮನೆಗೆ ತರಲಾಗಿತ್ತು. ಗಂಡನ ಮೃತದೇಹವನ್ನು ನೋಡಿ ಮತ್ತಷ್ಟು ಕುಗ್ಗಿದ ಅಂಜಲಿ, ಮೃತದೇಹದ ಪಕ್ಕ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಈ ವೇಳೆ ಬಾಲ್ಕನಿಗೆ ತೆರಳಿದ ಅಂಜಲಿ, ಘಾಜಿಯಾಬಾದ್ನ ವೈಶಾಲಿ ಸೆಕ್ಟರ್ 3ರಲ್ಲಿ ಇರುವ ಎಲ್ಕನ್ ಅಪಾರ್ಟ್ಮೆಂಟ್ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಟ್ಟಡದಿಂದ ಜಿಗಿದು ಗಂಭೀರ ಸ್ಥಿತಿಯಲ್ಲಿದ್ದ ಅಂಜಲಿಯನ್ನು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ವೈದ್ಯರ ಸಲಹೆ ಮೇರೆಗೆ ಎಐಐಎಂಎಸ್‌ಗೆ ಸ್ಥಳಾಂತರ ಮಾಡಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಗಂಭೀರ ಗಾಯಗಳಿಂದ ಅಂಜಲಿ ಅಸುನೀಗಿದಳು. (ಏಜೆನ್ಸೀಸ್)
ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್?
ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್
ಪ್ಲೀಸ್ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!