ಕೊನೆಗೂ ಈಡೇರಲಿಲ್ಲ ಸುಶಾಂತ್​ ಆಸೆ!; ಸಾಯುವ 4 ದಿನದ ಮುಂಚೆ ಅಕ್ಕನ ಜತೆ ವಾಟ್ಸಾಪ್​ ಚಾಟಿಂಗ್

collage (12)
Published on

ಸುಶಾಂತ್ ಸಿಂಗ್​ ರಜಪೂತ್​ ಜೂನ್​ 14ರಂದು ಆತ್ಮಹತ್ಯೆ ಮಾಡಿಕೊಂಡು ದೊಡ್ಡ ಶಾಕ್​ ನೀಡಿದ್ದರು. ಅದಾದ ಬಳಿಕ ಅವರ ಸಾವಿನ ವಿಚಾರ ದೊಡ್ಡ ಮಟ್ಟದ ಸುದ್ದಿಯಾಯಿತು. ಇಂದಿಗೂ ಅದು ತನಿಖೆ ಹಂತದಲ್ಲಿ ಇರುವುದರಿಂದ ಟ್ವಿಸ್ಟ್ ಮೇಲೆ ಟ್ವಿಸ್ಟ್​ ಸಿಗುತ್ತಲೇ ಇದೆ. ಹೀಗಿರುವಾಗಲೇ ಸುಶಾಂತ್​ ಸಾಯುವ ನಾಲ್ಕು ದಿನದ ಮುಂಚೆ ಅಕ್ಕ ಶ್ವೇತಾ ಜತೆ ಸುಶಾಂತ್​ ಚಾಟಿಂಗ್​ ಮಾಡಿದ್ದರು. ಇದೀಗ ಅದೇ ಚಾಟಿಂಗ್​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಹೌದು, ಜೂನ್​ 9ಕ್ಕೆ ವಾಟ್ಸಾಪ್​ನಲ್ಲಿ ಸುಶಾಂತ್​ ಜತೆ ಚಾಟಿಂಗ್​ ಮಾಡಿದ್ದರು ಅಕ್ಕ ಶ್ವೇತಾ. ‘ಹೇಗಿದ್ದೀಯಾ ನನ್ನ ಮುದ್ದಿನ ಬಾಬು? ಲವ್​ ಯೂ’, ‘ನಾನಿರುವಲ್ಲಿಗೆ ಬಂದು ಬಿಡು ಬೇಬಿ..’, ‘ನೀನು ಮತ್ತು ರಾಣಿ ಒಟ್ಟಿಗೆ ಬಂದು ಬಿಡಿ’ ಎಂದು ವಾಟ್ಸಾಪ್ ಚಾಟ್​ನ ಸ್ಕ್ರೀನ್​ ಶಾಟ್​ ಅನ್ನು ಶ್ವೇತಾ ಹಂಚಿಕೊಂಡಿದ್ದಾರೆ. ಆ ಮಾತಿಗೆ ಉತ್ತರಿಸಿದ್ದ ಸುಶಾಂತ್​, ‘ನನಗೂ ಬರಬೇಕಂತ ತುಂಬ ಮನಸ್ಸಿದೆ ಅಕ್ಕ’ ಎಂದು ರಿಪ್ಲೇ ಮಾಡಿದ್ದರು. ಆದರೆ, ಅಮೆರಿಕದಲ್ಲಿನ ಅಕ್ಕನ ಮನೆಗೆ ಹೋಗಬೇಕೆಂಬ ಸುಶಾಂತ್​ ಆಸೆ ಕೊನೆಗೂ ಈಡೇರಲಿಲ್ಲ.

ಅಂದಹಾಗೆ ಸುಶಾಂತ್​ ಸಹೋದರಿ, ಅಮೆರಿಕದಲ್ಲಿ ವಾಸವಾಗಿದ್ದಾರೆ. ಅಲ್ಲಿದ್ದುಕೊಂಡೆ ಅಲ್ಲಿನ ಪರಿಸರದ ಫೋಟೋವನ್ನು ಸುಶಾಂತ್​ಗೆ ಕಳುಹಿಸಿ, ‘ಮತ್ಯಾಕೆ ತಡ ಬೇಗ ಬಂದು ಬಿಡು. ಒಮದು ತಿಂಗಳ ಕಾಲ ಹಾಯಾಗಿ ಇರಬಹುದು. ನಿನಗೂ ಒಂದು ರೀತಿ ರಿಫ್ರೆಶ್​ ಆಗುತ್ತೆ. ನಮ್ಮ ಸ್ನೇಹಿತರಿಗೂ ನೀನು ಇಲ್ಲಿಗೆ ಬಂದಿದ್ದನ್ನು ಹೇಳುತ್ತೇನೆ. ಒಂದೊಳ್ಳೆ ಸಮಯ ಕಳೆಯಬಹುದು. ವಾಕ್​ ಮಾಡಬಹುದು, ಲಾಂಗ್​ ಡ್ರೈವ್​ ಹೋಗಬಹುದು’ ಎಂದು ವಾಟ್ಸಾಪ್​ನಲ್ಲಿ ಸಂದೇಶ ಕಳುಹಿಸಿದ್ದರು.

ಇದೀಗ ಇವೆಲ್ಲ ಸ್ಕ್ರೀನ್​ ಶಾಟ್​ ಜತೆಗೆ ಸುಶಾಂತ್​ ಬಾಲ್ಯದ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಶ್ವೇತಾ, ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರತಿ ಕ್ಷಣ ಸುಶಾಂತ್​ಗೆ ಹೇಗೆ ಬೆನ್ನೆಲುಬಾಗಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net