ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಸುಶಾಂತ್​ ಸಿಂಗ್​ ರಜಪೂತ್​ ...

Sushant Singh Rajaput 1 - Final
Published on

ಮುಂಬೈ: ಈ ವರ್ಷ ಸಾಕಷ್ಟು ಸುದ್ದಿಯಾದ ವ್ಯಕ್ತಿಯೆಂದರೆ ಅದು ಬಾಲಿವುಡ್ ನಟ ಸುಶಾಂತ್​ ಸಿಂಗ್​ ರಜಪೂತ್​. ಜೂನ್​ 14ರಂದು ಮುಂಬೈನ ತಮ್ಮ ಫ್ಲಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರಜಪೂತ್​, ನಂತರದ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದೇ ಇದ್ದಾರೆ.

ಬರೀ ಸುದ್ದಿಯಲ್ಲಿರುವುದಷ್ಟೇ ಅಲ್ಲ, ಯಾಹೂ ವಾರ್ಷಿಕ ಲಿಸ್ಟ್​ನಲ್ಲಿ ಅತೀ ಹೆಚ್ಚು ಸರ್ಚ್​​ ಮಾಡಲಾಗಿರುವ ಪುರುಷ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸುಶಾಂತ್​ ಸಿಂಗ್​ ರಜಪೂತ್​ ಅಲಂಕರಿಸಿದ್ದಾರೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದು, ಸುಶಾಂತ್​ ಮೊದಲ ಸ್ಥಾನದಲ್ಲಿದ್ದರೆ, ಎರಡನೆಯ ಸ್ಥಾನದಲ್ಲಿ ಮೋದಿ ಇದ್ದಾರೆ.

ಈ ಪಟ್ಟಿಯಲ್ಲಿ ಭಾರತದ ಸಾಕಷ್ಟು ಸೆಲೆಬ್ರಿಟಿಗಳು ಇದ್ದು, ಮೂರನೆಯ ಸ್ಥಾನದಲ್ಲಿ ಅಮಿತಾಭ್​ ಬಚ್ಚನ್​ ಇದ್ದರೆ, ಅಕ್ಷಯ್​ ಕುಮಾರ್​ ನಾಲ್ಕನೇ ಸ್ಥಾನಕ್ಕೆ ಬಂದಿದ್ದಾರೆ. ಇನ್ನು ಸಲ್ಮಾನ್​ ಖಾನ್​, ಇರ್ಫಾನ್​ ಖಾನ್​, ರಿಷಿ ಕಪೂರ್, ಎಸ್​.ಪಿ. ಬಾಲಸುಬ್ರಹ್ಮಣ್ಯಂ, ಸೋನು ಸೂದ್​, ಅನುರಾಗ್​ ಕಶ್ಯಪ್​ ಮತ್ತು ಅಲ್ಲು ಅರ್ಜುನ್​ ಈ ಪಟ್ಟಿಯಲ್ಲಿದ್ದಾರೆ.

ಇನ್ನು ಅತೀ ಹೆಚ್ಚು ಸರ್ಚ್​​ ಮಾಡಲಾಗಿರುವ ಪುರುಷ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸುಶಾಂತ್​ ಅವರ ಗೆಳತಿ ರಿಯಾ ಚಕ್ರವರ್ತಿ ಇದ್ದು, ಅವರ ನಂತರದ ಸ್ಥಾನವನ್ನು ಕಂಗನಾ ರಣಾವತ್​ ಅಲಂಕರಿಸಿದ್ದಾರೆ. ನಂತರದ ಸ್ಥಾನಗಳಲ್ಲಿ ದೀಪಿಕಾ ಪಡುಕೋಣೆ, ಸನ್ನಿ ಲಿಯೋನ್​, ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಪ್​, ನೇಹಾ ಕಕ್ಕರ್​, ಕನ್ನಿಕಾ ಕಪೂರ್​, ಕರೀನಾ ಕಪೂರ್​ ಮತ್ತು ಸಾರಾ ಅಲಿ ಖಾನ್​ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net